ವಾಹನಗಳಿಗೆ ಸಿ.ಎಂ.ವಿ ಕಾಯ್ದೆಯಡಿಯಲ್ಲಿ ನಮೂದಿಸಿರುವ ಮಾನದಂಡದಂತೆ ಎಲ್.ಇ.ಡಿ. ದೀಪಗಳನ್ನು ಅಳವಡಿಸುವುದು ಕಡ್ಡಾಯ

ಇತ್ತೀಚಿನ ದಿನಗಳಲ್ಲಿ ವಾಹನಗಳಿಗೆ ಅತೀ ಹೆಚ್ಚು ಬೆಳಕು ಹೊರಹಾಕುವ ಎಲ್.ಇ.ಡಿ. ದೀಪಗಳನ್ನು ಅಳವಡಿಸುತ್ತಿದ್ದು, ಇದರಿಂದ ಎದುರುಗಡೆ ಬರುವ ಸವಾರರಿಗೆ ವಾಹನ ಚಲಾಯಿಸಲು ತೊಂದರೆಯುಂಟಾಗುತ್ತಿದೆ. ಅಷ್ಟೇ ಅಲ್ಲದೆ ಪ್ರಖರ ಬೆಳಕಿನ ದೀಪಗಳನ್ನು ಬಳಸುವುದರಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವುದು ಕಂಡು ಬರುತ್ತಿದೆ.ಎಲ್ಲಾ ವಾಹನ ಸವಾರರು ಕಣ್ಣು ಕುಕ್ಕುವ, ಪ್ರಖರ ಬೆಳಕನ್ನು ಹೊರ ಹಾಕುವ ದೀಪಗಳನ್ನು ವಾಹನಗಳಲ್ಲಿ ಬಳಸದೆ, ಕೇಂದ್ರ ಮೋಟಾರು ಕಾಯ್ದೆಯಲ್ಲಿ ನಮೂದಿಸಿರುವ ಮಾನದಂಡದಂತೆ ಅಳವಡಿಸಬೇಕಾಗಿರುವ ಹೆಡ್ ಲೈಟ್ ಗಳನ್ನೇ ಅಳವಡಿಸಬೇಕಾಗಿರುವುದು ಕಡ್ಡಾಯವಾಗಿರುತ್ತದೆ. ಒಂದು ವೇಳೆ ಸಿ.ಎಂ.ವಿ. ಕಾಯ್ದೆಯಲ್ಲಿನ ನಿಯಮಗಳನ್ನು … Read more

ಕರ್ನಾಟಕ ಭಾರತ್ ಗೌರವ್ ದಕ್ಷಿಣ ಕ್ಷೇತ್ರಗಳ ಯಾತ್ರೆ

ಧಾರ್ಮಿಕ ದತ್ತಿ ಇಲಾಖೆ ರಾಮೇಶ್ವರಂ- ಕನ್ಯಾಕುಮಾರಿ-ಮಧುರೈ-ತಿರುವನಂತಪುರಂ ಮೊದಲಾದ ಸ್ಥಳಗಳಿಗೆ ಕರ್ನಾಟಕ ಭಾರತ್ ಗೌರವ್ ದಕ್ಷಿಣ ಕ್ಷೇತ್ರಗಳ ಯಾತ್ರೆ ಹಮ್ಮಿಕೊಂಡಿರುತ್ತದೆ. ಪ್ರತಿ ಯಾತ್ರಾರ್ಥಿಗೆ ರೂ.5000/- ಸಹಾಯಧನ ನಿಗದಿಪಡಿಸಲಾಗಿದೆ. ಯಾತ್ರೆಯ ಒಟ್ಟು ಪ್ಯಾಕೇಜ್ ಮೊತ್ತ ರೂ.15000/- ಇರುತ್ತದೆ. ಸರಕಾರದಿಂದ ರೂ.5000/- ಸಹಾಯಧನ ಸಿಗುವ ಕಾರಣ ಯಾತ್ರಿಕರು ರೂ.10,000/- ಪಾವತಿಸಬೇಕಾಗುತ್ತದೆ.ಬೆಳಗಾವಿ, ಹುಬ್ಬಳ್ಳಿ, ಬೀರೂರು, ತುಮಕೂರು, ಹಾವೇರಿ, ದಾವಣಗೆರೆ, ಯಶವಂತಪುರ ಈ ಸ್ಥಳಗಳಿಂದ ವಿಶೇಷ ರೈಲಿನ ವ್ಯವಸ್ಥೆ ಇರುತ್ತದೆ. ಮೊದಲ ಹಂತದಲ್ಲಿ ದಿನಾಂಕ 23.06.2024ರಂದು ರೈಲು ನಿರ್ಗಮಿಸಿ ದಿನಾಂಕ 28.06.2024 ಆಗಮಿಸುತ್ತದೆ. ಎರಡನೇ … Read more

ಜಿ.ಎನ್.ಎಂ. ನರ್ಸಿಂಗ್ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಶುಶ್ರೂಷಾ ಪರೀಕ್ಷಾ ಮಂಡಳಿ ವತಿಯಿಂದ 2024-25 ನೇ ಸಾಲಿನ ಜಿ.ಎನ್.ಎಂ. ನರ್ಸಿಂಗ್ ಕೋರ್ಸ್ ಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ದ್ವಿತೀಯ ಪಿಯುಸಿ 40% ಅಂಕಗಳೊಂದಿಗೆ ತೇರ್ಗಡೆಯಾದ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭ್ಯರ್ಥಿಗಳು ಜಾತಿ ಪ್ರಮಾಣ ಪತ್ರ ಒದಗಿಸಿದ್ದಲ್ಲಿ 5% ಅಂಕ ವಿನಾಯಿತಿ ನೀಡಲಾಗುವುದು. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 17 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಗರಿಷ್ಟ ವಯಸ್ಸಿನ ಮಿತಿ ಇಲ್ಲ .ಕೆ.ಎಸ್.ಎನ್.ಸಿ. ಯಿಂದ ಮಾನ್ಯತೆ ಹೊಂದಿದ ಕಾಲೇಜುಗಳಲ್ಲಿ ದಾಖಲಾದ … Read more

2024-25ನೇ ಸಾಲಿನ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ

ಮಂಗಳೂರಿನ ಬೈಕಂಪಾಡಿಯಲ್ಲಿರುವ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ2024-25ನೇ ಸಾಲಿನ ಡಿಪ್ಲೋಮಾ ಕೋರ್ಸುಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಅಭ್ಯರ್ಥಿಗಳು ನೇರವಾಗಿ ಕಾಲೇಜಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು. ದ್ವಿತೀಯ ಪಿಯುಸಿ (ವಿಜ್ಞಾನ) ಅಥವಾ ಐಟಿಐ ತರಬೇತಿ ಪಡೆದ ವಿದ್ಯಾರ್ಥಿಗಳು ನೇರವಾಗಿ ದ್ವಿತೀಯ ವರ್ಷದ ಕೋರ್ಸುಗಳಿಗೆ ಪ್ರವೇಶ ಪಡೆಯಬಹುದಾಗಿದೆ.ಅರ್ಹ ಅಭ್ಯರ್ಥಿಗಳಿಗೆ ವಿದ್ಯಾರ್ಥಿ ವೇತನ ಕೂಡ ಸಿಗುವುದು. ಸರ್ಕಾರದ ಕೌಶಲಾಭಿವೃದ್ಧಿ ಇಲಾಖೆಯಡಿ ಡಿಪ್ಲೋಮಾ ಕೋರ್ಸು 3+1 ಪಠ್ಯಕ್ರಮ ಮೂಲಕ ತರಬೇತಿ ನೀಡಲಾಗುವುದು. 3 ವರ್ಷದ ಡಿಪ್ಲೋಮ ತರಬೇತಿ … Read more

ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಆನ್ಲೈನ್ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಖಾಲಿ ಇರುವ 90 ವಿವಿಧ ವೃಂದದ ಹುದ್ದೆಗಳಿಗೆ ಪ್ರಾಧಿಕಾರದ ಅಧಿಸೂಚನೆ ದಿನಾಂಕ 09.06.2024 ರಲ್ಲಿ ಸೂಚಿಸಿದಂತೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 16.05.2024 ರಿಂದ 15.06.2024 ರ ವರೆಗೆ ಅವಕಾಶ ನೀಡಲಾಗಿತ್ತು. ಆದರೆ ಕೆಲವು ಅಭ್ಯರ್ಥಿಗಳು ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರಗಳಿಗೆ ಮನವಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸಲು ಕೋರಿದ್ದರಿಂದ ಸದರಿ ಸಂಸ್ಥೆಯು ಪತ್ರ ಬರೆದು ಅರ್ಜಿ ಸಲ್ಲಿಕೆಯನ್ನು ವಿಸ್ತರಿಸುವಂತೆ ಪ್ರಾಧಿಕಾರಕ್ಕೆ ಕೋರಿರುತ್ತಾರೆ. ಆದ್ದರಿಂದ … Read more

ಅರೆ ವೈದ್ಯಕೀಯ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ

2024-25ನೇ ಶೈಕ್ಷಣಿಕ ಸಾಲಿನ ಅರೆ ವೈದ್ಯಕೀಯ ಡಿಪ್ಲೋಮಾ ಕೋರ್ಸ್ ಗಳಿಗೆ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ, ಹಾಗೂ ಇತರೆ ಸರ್ಕಾರಿ ಆಸ್ಪತ್ರೆಗಳು ಹಾಗೂ ರಾಜ್ಯದಲ್ಲಿನ ವಿವಿಧ ಖಾಸಗಿ ಪ್ಯಾರಾ ಮೆಡಿಕಲ್ ಸಂಸ್ಥೆಗಳಲ್ಲಿನ ಸರಕಾರಿ ಕೋಟಾದ ಸೀಟುಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಎಸ್.ಎಲ್.ಎಲ್.ಸಿ / ಪಿಯುಸಿ ತತ್ಸಮಾನ ವಿದ್ಯಾರ್ಹತೆ ಹೊಂದಿದವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿದಾರರು 1ನೇ ತರಗತಿಯಿಂದ ಎಸ್.ಎಲ್.ಎಲ್.ಸಿ/ಪಿಯುಸಿಯ ವರೆಗೆ ಕನಿಷ್ಠ 7 ವರ್ಷಗಳು ಕರ್ನಾಟಕದಲ್ಲಿ ವಿದ್ಯಾಭ್ಯಾಸ ಮಾಡಿರಬೇಕು. ಕೋರ್ಸಿನ ಅವಧಿ ಪಿಯುಸಿ ಅಭ್ಯರ್ಥಿಗಳಿಗೆ 2 ವರ್ಷ … Read more

ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ದ.ಕ.ಜಿಲ್ಲೆಯಾದ್ಯಂತ ವಿವಿಧ ಹುದ್ದೆಗಳ ನೇಮಕ

ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಒಂದು ವರ್ಷದ ಅವಧಿಗೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು, ಮಕ್ಕಳ ತಜ್ಞರು ಅರವಳಿಕೆ ತಜ್ಞರು ಮತ್ತು ಫಿಶಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಡಿ.ಇ.ಐ.ಸಿ. ಘಟಕದ ಮಕ್ಕಳ ತಜ್ಞರ ಹುದ್ದೆಗೆ , ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ಐಸಿಯು ಘಟಕದ ಎಂ.ಬಿ.ಬಿ.ಎಸ್. ಹುದ್ದೆಗೆ, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಎನ್.ಐ.ಸಿ.ಯು. ಘಟಕದ ಎಂ.ಬಿ.ಬಿ.ಎಸ್. ಹುದ್ದೆಗೆ, ನಗರ ಸಮುದಾಯ ಆರೋಗ್ಯ ಕೇಂದ್ರ ಉಳ್ಳಾಲ ಇಲ್ಲಿಗೆ ಎಂ.ಬಿ.ಬಿ.ಎಸ್. … Read more

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ನಲ್ಲಿ 247 ವಿವಿಧ ಹುದ್ದೆಗಳಿಗೆ ನೇಮಕಾತಿ

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ನಲ್ಲಿ 247 ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮೆಕ್ಯಾನಿಕಲ್ ಇಂಜಿನಿಯರ್, ಸಿವಿಲ್ ಇಂಜಿನಿಯರ್, ಎಲೆಕ್ಟ್ರಾನಿಕ್ ಇಂಜಿನಿಯರ್, ಸೀನಿಯರ್ ಆಫೀಸರ್ ಸೇರಿದಂತೆ ವಿವಿಧ ಹುದ್ದೆಗಳಿಗೆ 05.06.2024 ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ‌. 30.06.2024 ಅರ್ಜಿ ಸಲ್ಲಿಸಲು ಕೊನೆಯ ದಿ‌ನಾಂಕವಾಗಿದೆ. .ಅರ್ಜಿ ಸಲ್ಲಿಸುವವರು ಹೆಚ್.ಪಿ.ಸಿ.ಎಲ್. ನೇಮಕಾತಿ ಪೋರ್ಟಲ್ ಗೆ ಭೇಟಿ ನೀಡಿ ಅಗತ್ಯ ಮಾಹಿತಿಗಳನ್ನು ತುಂಬಿ ರಿಜಿಸ್ಟರ್ ಆಗಿ ನಂತರ ಸವಿವರವಾದ ಮಾಹಿತಿ ತುಂಬಿ ದಾಖಲೆಗಳನ್ನು ಅಪ್ ಲೋಡ್ … Read more

ಯುಎಇ ಪ್ರವಾಸ ಹೋಗುವ ಪ್ರವಾಸಿಗರ ಗಮನಕ್ಕೆಅತ್ಯಂತ ಪ್ರಮುಖ ಮಾಹಿತಿ

UAE ಗೆ ಪ್ರವಾಸ ಹೋಗುವ ಪ್ರವಾಸಿಗರು ತಿಳಿದಿರಬೇಕಾದ ಅಗತ್ಯ ವಿವರಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ತೆರಳುವ ಪ್ರವಾಸಿಗರು ಈ ಕೆಳಗೆ ಕಾಣಸಿದ ದಾಖಲೆಗಳನ್ನು ಅಗತ್ಯವಾಗಿ ಹೊಂದಿರಬೇಕಾಗುತ್ತದೆ. ಸಂಬಂಧಿಕರು / ಗೆಳೆಯರನ್ನು ಸಂದರ್ಶಿಸಲು ಹೋಗುವ ಪ್ರವಾಸಿಗರು ಹೊಂದಿರಬೇಕಾದ ಹೆಚ್ಚುವರಿದಾಖಲೆಗಳು