ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPFs), ಅಸ್ಸಾಂ ರೈಫಲ್ಸ್, ಮತ್ತು ಮಾದಕ ದ್ರವ್ಯ ನಿಯಂತ್ರಣ (NCB) ನೆಮಕಾತಿ ಪರೀಕ್ಷೆ-2025: ಸಂಪೂರ್ಣ ಮಾಹಿತಿ ಇಲ್ಲಿದೆ

0
WhatsApp Group Join Now
Telegram Group Join Now

ಈ ಬ್ಲಾಗ್‌ನಲ್ಲಿ, ನಾವು 2025 ರ “ಸಶಸ್ತ್ರ ಪೊಲೀಸ್ ಪಡೆ ” (CAPFs) ವಿಶೇಷ ಭದ್ರತಾ ಪಡೆ (SSF), ಅಸ್ಸಾಂ ರೈಫಲ್ಸ್, ಮತ್ತು ಮಾದಕ ವಸ್ತುಗಳ ನಿಯಂತ್ರಣ ಮಂಡಳಿ (NCB)” ನೇಮಕಾತಿ ಪರೀಕ್ಷೆಯ ಕುರಿತಂತೆ ಸಂಪೂರ್ಣ ವಿವರಗಳನ್ನು ನೀಡಿದ್ದೇವೆ. ಇವು ಕಾನ್ಸ್‌ಟೇಬಲ್ (ಸಾಮಾನ್ಯ ಕರ್ತವ್ಯ – GD), ರೈಫಲ್ಮನ್ (GD), ಮತ್ತು ಸಿಪಾಯಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳ ನೇಮಕಾತಿಗಾಗಿ ನಡೆಸಲಾಗುತ್ತದೆ.

ನೇಮಕಾತಿ ಪರೀಕ್ಷೆಯ ಉದ್ದೇಶ ಮತ್ತು ಹುದ್ದೆಗಳ ವಿವರಗಳು

ಈ ನೇಮಕಾತಿ ಪರೀಕ್ಷೆ ಕೆಳಕಂಡ ಹುದ್ದೆಗಳಿಗೆ ಸಂಬಂಧಿಸಿದೆ:

  • ಕಾನ್ಸ್‌ಟೇಬಲ್ (ಸಾಮಾನ್ಯ ಕರ್ತವ್ಯ) – CAPFs ಮತ್ತು SSF
  • ರೈಫಲ್ಮನ್ (ಸಾಮಾನ್ಯ ಕರ್ತವ್ಯ) – ಅಸ್ಸಾಂ ರೈಫಲ್ಸ್ಸ
  • ಸಿಪಾಯಿ – ಮಾದಕ ವಸ್ತುಗಳ ನಿಯಂತ್ರಣ ಮಂಡಳಿ (NCB).

ಈ ಹುದ್ದೆಗಳು ಭಾರತ ಸರ್ಕಾರದ ಪ್ಯಾರಾಮಿಲಿಟರಿ ಪಡೆಯ ಮೇಲೆ ತಮ್ಮ ಸೇವೆಯನ್ನು ನೀಡಲು ಇಚ್ಛಿಸುವ ಆಕಾಂಕ್ಷಿಗಳಿಗೆ ದೊಡ್ಡ ಅವಕಾಶವಾಗಿದೆ.

ಮಹತ್ವದ ದಿನಾಂಕಗಳು:

  • ಅಭ್ಯರ್ಥಿಗಳು ತಮ್ಮ ಕಾಲಮಿತಿ ಮತ್ತು ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿ ಮಾಡಿಕೊಳ್ಳಬೇಕು.
  • ಅರ್ಜಿಯನ್ನು ಸಲ್ಲಿಸುವ ಆರಂಭ ದಿನಾಂಕ : 05.09.2024
  • ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ: 14.10.2024.

ಅರ್ಹತಾ ನಿಯಮಗಳು (Eligibility Criteria):

  • ವಿದ್ಯಾರ್ಹತೆ: ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು (ಮ್ಯಾಟ್ರಿಕ್ಯುಲೇಶನ್ ಪಾಸ್).
  • ವಯೋಮಿತಿ: ಸಾಮಾನ್ಯವಾಗಿ 18-23 ವರ್ಷ. ವಿವಿಧ ವರ್ಗಗಳಿಗೆ ಸರ್ಕಾರದ ನಿಯಮಾವಳಿ ಪ್ರಕಾರ ಸಡಿಲಿಕೆ ಇದೆ.

ವಿವಿಧ ವರ್ಗಗಳಿಗೆ ವಯೋಮಿತಿಯ ಸಡಿಲಿಕೆ:

  • ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡ: 5 ವರ್ಷಗಳ ವಯೋಮಿತಿ ಸಡಿಲಿಕೆ ಕಲ್ಪಿಸಲಾಗಿದೆ.
  • ಇತರೆ ಹಿಂದುಳಿದ ವರ್ಗ: 3 ವರ್ಷಗಳ ವಯೋಮಿತಿ ಸಡಿಲಿಕೆ ಕಲ್ಪಿಸಲಾಗಿದೆ.

ಪರೀಕ್ಷಾ ಶುಲ್ಕ ಮತ್ತು ಅರ್ಜಿ ಸಲ್ಲಿಕೆ ಪ್ರಕ್ರಿಯೆ:

  • ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು. ಅಧಿಕೃತ ವೆಬ್‌ಸೈಟ್‌ನಲ್ಲಿ, ಎಲ್ಲಾ ಮಾಹಿತಿ ಒದಗಿಸಲಾಗುವುದು.

ಶುಲ್ಕದ ವಿವರ;

  • ಸಾಮಾನ್ಯ/ಇತರೇ ಹಿಂದುಳಿದ ವರ್ಗ/ ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ: ₹100
  • ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಮಹಿಳಾ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.
ಅರ್ಜಿ ಸಲ್ಲಿಕೆ ಹಂತಗಳು:
  • ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
  • ಹೊಸ ನೋಂದಣಿ ಮಾಡಿ ಅಥವಾ ಲಾಗಿನ್ ಮಾಡಿ.
  • ಅಗತ್ಯವಿರುವ ವಿವರಗಳನ್ನು ತುಂಬಿ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ಶುಲ್ಕ ಪಾವತಿ ಮಾಡಿ ಮತ್ತು ಅರ್ಜಿಯನ್ನು ಸಲ್ಲಿಸಿ.

ಆಯ್ಕೆ ಪ್ರಕ್ರಿಯೆ :

ಅಭ್ಯರ್ಥಿಗಳ ಆಯ್ಕೆ ಮೂರು ಹಂತಗಳ ಪ್ರಕ್ರಿಯೆಯಲ್ಲಿ ನಡೆಯುತ್ತದೆ:

ದೈಹಿಕ ದಕ್ಷತಾ ಪರೀಕ್ಷೆ (PET):

  • ಪುರುಷರು: 5 ಕಿಮೀ ಓಟ 24 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು.
  • ಮಹಿಳೆಯರು: 1.6 ಕಿಮೀ ಓಟ 8.5 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು.

ದೈಹಿಕ ಪ್ರಮಾಣಪತ್ರ ಪರೀಕ್ಷೆ (PST):

  • ಪುರುಷರ ಎತ್ತರ: 170 ಸೆ.ಮೀ. (SC/ST/ಅವರು ಸೇರಿದವರಿಗೆ 5 ಸೆ.ಮೀ ರಿಯಾಯಿತಿ)
  • ಮಹಿಳೆಯರ ಎತ್ತರ: 157 ಸೆ.ಮೀ. (SC/ST/ಅವರು ಸೇರಿದವರಿಗೆ 5 ಸೆ.ಮೀ ರಿಯಾಯಿತಿ)

ಲಿಖಿತ ಪರೀಕ್ಷೆ (Computer-Based Test – CBT):

  • ಪ್ರಶ್ನೆ ಪತ್ರಿಕೆ: ಸಾಮಾನ್ಯ ಜ್ಞಾನ, ಗಣಿತ, ರೀಜನಿಂಗ್, ಮತ್ತು ಹಿಂದಿ/ಆಂಗ್ಲ ಭಾಷೆ.
  • ಕಾಲಾವಧಿ: 90 ನಿಮಿಷ.

ಪಠ್ಯಕ್ರಮ ಮತ್ತು ಪರೀಕ್ಷಾ ಮಾದರಿ:

ಪರೀಕ್ಷೆಯು ನಾಲ್ಕು ವಿಭಾಗಗಳಿಂದ ಕೂಡಿದೆ:

  • ಸಾಮಾನ್ಯ ಜ್ಞಾನ ಮತ್ತು ಸಾಮಾನ್ಯ ಜಾಗೃತಿ
  • ಪ್ರಾಥಮಿಕ ಗಣಿತ
  • ಆಂಗ್ಲ / ಹಿಂದಿ ಭಾಷೆ
  • ತಾರ್ಕಿಕ ಸಾಮರ್ಥ್ಯ
  • ಪ್ರತಿ ಪ್ರಶ್ನೆ 1 ಅಂಕಕ್ಕೆ ಮತ್ತು ನೆಗಟಿವ್ ಮಾರ್ಕಿಂಗ್: 0.25 ಅಂಕ ಕಡಿತ.

ಪರೀಕ್ಷಾ ಕೇಂದ್ರಗಳು :

  • ವಿಭಿನ್ನ ರಾಜ್ಯಗಳಲ್ಲಿ ವಿವಿಧ ಕೇಂದ್ರಗಳು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ನಿಕಟಮ ಕೇಂದ್ರವನ್ನು ಆಯ್ಕೆ ಮಾಡಬಹುದು.

ಫಲಿತಾಂಶ ಮತ್ತು ಹೆಚ್ಚಿನ ಪ್ರಕ್ರಿಯೆಗಳು

  • ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಡಾಕ್ಯುಮೆಂಟ್ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಯುತ್ತದೆ.

ಆಯ್ಕೆ ನಂತರದ ಸೌಲಭ್ಯಗಳು ಮತ್ತು ವೇತನ

  • ವೇತನ ಶ್ರೇಣಿ: ₹21,700 – ₹69,100 (Level 3)
  • ಭತ್ಯೆಗಳು: ಮನೆ ಬಾಡಿಗೆ, ದೈನಂದಿನ ಭತ್ಯೆ, ವೈದ್ಯಕೀಯ ಸೌಲಭ್ಯಗಳು, ಇತ್ಯಾದಿ.
ಸಂಪರ್ಕ ಮಾಹಿತಿ ಮತ್ತು ಸಹಾಯವಾಣಿ ಸಂಖ್ಯೆ

Leave a Reply

Your email address will not be published. Required fields are marked *

WhatsApp Group Join Now
Telegram Group Join Now

You may have missed