ಮೊರಾರ್ಜಿ ದೇಸಾಯಿ ಶಾಲೆ: ಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನ
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿರುವ ಮೊರಾರ್ಜಿ
ದೇಸಾಯಿ ವಸತಿ ಶಾಲೆಯಲ್ಲಿ ಖಾಲಿ ಇರುವ ಮೂರು
ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರ ನೆಲೆಯಲ್ಲಿ ನೇಮಕ
ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಕನ್ನಡ
ಭಾಷಾ ಸಹ ಶಿಕ್ಷಕ, ಹಿಂದಿ ಭಾಷಾ ಸಹ ಶಿಕ್ಷಕ ಹಾಗೂ
ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಖಾಲಿ ಇದ್ದು ಬಿಎ ಬಿ.ಇಡಿ/ಬಿಪಿಇಡಿ ಕನಿಷ್ಠ ವಿದ್ಯಾರ್ಹತೆ ಅಗತ್ಯವಿದ್ದು, ಹೆಚ್ಚಿನ ವಿದ್ಯಾರ್ಹತೆಗೆ ಆದ್ಯತೆ ನೀಡಲಾಗುವುದು.
ಆಸಕ್ತರು ಮೇ 31ರೊಳಗೆ ಅರ್ಜಿ ಸಲ್ಲಿಸುವಂತೆ
ಶಾಲೆಯ ಪ್ರಾಚಾರ್ಯರ ಪ್ರಕಟಣೆ ತಿಳಿಸಿದೆ.