SSLC ಪರೀಕ್ಷೆ -2 ರ ಕುರಿತುಪ್ರೌಢ ಶಾಲಾ ಮುಖ್ಯ ಗುರುಗಳಿಗೆ ಪ್ರಮುಖ ಸೂಚನೆ
ಮಂಡಳಿಯ ಕಾಯ್ದೆ-1966 ನಿಯಮ-37ರನ್ವಯ ಶಾಲಾ
ವಿದ್ಯಾರ್ಥಿಯಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕುಳಿತುಕೊಳ್ಳಲು ಶಾಲೆಯು ಕಾರ್ಯ ನಿರ್ವಹಿಸಿದ ದಿನಗಳಿಗೆ
ಅನುಸಾರ ಕನಿಷ್ಠ ಶೇ.75ರಷ್ಟು ಹಾಜರಾತಿ ಕಡ್ಡಾಯವಾಗಿರುತ್ತದೆ. 2023-24ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆ-
1ಕ್ಕೆ ನೋಂದಾಯಿಸಿಕೊಂಡು, ಹಾಜರಾತಿ ಕೊರತೆಯಿಂದಾಗಿ ರಾಜ್ಯಾದಂತ ಅಂದಾಜು 26,692 ವಿದ್ಯಾರ್ಥಿಗಳ
ನೋಂದಣಿಯನ್ನು ಮುಖ್ಯ ಶಿಕ್ಷಕರು ಶಾಲಾ ಹಂತದಲ್ಲಿ ರದ್ದುಪಡಿಸಲಾಗಿರುವುದರಿಂದ ಸದರಿ ವಿದ್ಯಾರ್ಥಿಗಳು
2024ರ ಪರೀಕ್ಷೆ-1 ಕ್ಕೆ ಹಾಜರಾಗಲು ಸಾಧ್ಯವಾಗಿರುವುದಿಲ್ಲ.
ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಹಾಗೂ ಸದರಿ ವಿದ್ಯಾರ್ಥಿಗಳು ಮುಂದಿನ ಉನ್ನತ ಶಿಕ್ಷಣದ
ವ್ಯಾಸಂಗದಿಂದ ವಂಚಿತರಾಗದಂತೆ ಕ್ರಮವಹಿಸುವ ಸಲುವಾಗಿ, ಅಂತಹ ವಿದ್ಯಾರ್ಥಿಗಳಿಗೆ ಮಾತ್ರ ಜೂನ್-2024ರ
ಮಾಹೆಯಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆ-2ಕ್ಕೆ ಖಾಸಗಿ ಅಭ್ಯರ್ಥಿಗಳಾಗಿ (CCEPF) ಪರೀಕ್ಷೆಗೆ
ಅನ್‌ಲೈನ್ ಮೂಲಕ ಮುಖ್ಯೋಪಾಧ್ಯಾಯರ ಲಾಗಿನಲ್ಲಿ Registration for SSLC-2024 Exam-2 Menu ನಲ್ಲಿ
Registration For Private Freshಯೆಂಬ Sub-Menu ಬಳಸಿ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಉಲ್ಲೇಖಿತ-2ರ ಮಾರ್ಗಸೂಚಿಯಲ್ಲಿ ಖಾಸಗಿ ಅಭ್ಯರ್ಥಿಗಳಾಗಿ ನೋಂದಣಿ ಮಾಡಿಕೊಳ್ಳಲು ವಿಧಿಸಿರುವ
ಷರತ್ತುಗಳನ್ನು ಈ ಎಲ್ಲಾ ಅರ್ಹ ವಿದ್ಯಾರ್ಥಿಗಳು ಪಾಲಿಸಬೇಕಾಗಿರುತ್ತದೆ. 2024ರ ಪರೀಕ್ಷೆ-2ರಲ್ಲಿ ಈ ಅಭ್ಯರ್ಥಿಗಳಿಗೆ
ಪ್ರಥಮ ಪ್ರಯತ್ನವಾಗಿರುತ್ತದೆ, ಈ ಪರೀಕ್ಷೆಯಿಂದ ಸತತ ಆರು ಪ್ರಯತ್ನಗಳ ಒಳಗಾಗಿ ಉತ್ತೀರ್ಣ ಹೊಂದಲು
ಅವಕಾಶ ಕಲ್ಪಿಸಲಾಗಿರುತ್ತದೆ. ಈ ಅವಕಾಶದ ನಂತರವೂ ಪೂರ್ಣಗೊಳಿಸಲಾಗದ (NOT COMPLETED)
ಅಭ್ಯರ್ಥಿಗಳು ನಂತರದ ಪರೀಕ್ಷೆಯಿಂದ ನಿಯಮಾನುಸಾರ ಹೊಸದಾಗಿ ಖಾಸಗಿ ಅಭ್ಯರ್ಥಿಯಾಗಿ
ನೋಂದಾಯಿಸಿಕೊಂಡು ಎಲ್ಲಾ ವಿಷಯಗಳ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ವಿದ್ಯಾರ್ಥಿಗಳು
ಮಾರ್ಚ್-2024ರ ಪರೀಕ್ಷೆ-1 ಕ್ಕೆ ನೋಂದಾಯಿಸಿ ಈಗಾಗಲೇ ಪರೀಕ್ಷಾ ಶುಲ್ಕ ಪಾವತಿಸಿರುತ್ತಾರೆ. ಆದ್ದರಿಂದ ಸದರಿ
ಅಭ್ಯರ್ಥಿಗಳು 2024ರ ಪರೀಕ್ಷೆ-2 ಕ್ಕೆ ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿ ಪರೀಕ್ಷೆಗೆ ಹಾಜರಾಗಲು ನೋಂದಣಿ
ಶುಲ್ಕವನ್ನು ಮಾತ್ರ ಪಾವತಿಸತಕ್ಕದ್ದು. ಸಂಬಂಧಪಟ್ಟ ಶಾಲಾ ಮುಖ್ಯೋಪಾಧ್ಯಾಯರು ಖಾಸಗಿ ಅಭ್ಯರ್ಥಿಗಳಾಗಿ
ನೋಂದಾಯಿಸಲು ಇರುವ ನಿಯಮದಂತೆ ತಮ್ಮ ಶಾಲಾ ಅಭ್ಯರ್ಥಿಗಳನ್ನು ನೋಂದಾಯಿಸಿ ಕೆಳಕಂಡ
ದಿನಾಂಕದೊಳಗೆ ಆನ್ ಲೈನ್ ಮುಖಾಂತರ ಶುಲ್ಕ ಪಾವತಿಸಲು ತಿಳಿಸಿದೆ.