ಆಧಾರ್ – ಪ್ಯಾನ್ ಲಿಂಕ್ ಮಾಡದವರು ಗಮನಿಸಿ

0
WhatsApp Group Join Now
Telegram Group Join Now

ಈ ವರುಷದ ಮೇ 31ರ ಒಳಗಾಗಿ ಆಧಾರ್ – ಪ್ಯಾನ್ ಜೋಡಣೆ ಮಾಡದವರಿಗೆ ಡಬಲ್ ತೆರಿಗೆ ಬೀಳಲಿದೆ. ಆದಾಯ ತೆರಿಗೆ ಇಲಾಖೆ ಮಂಗಳವಾರ ಈ ಕುರಿತು ಎಚ್ಚರಿಕೆ ನೀಡಿದೆ.
ಮೇ ತಿಂಗಳ ಅಂತ್ಯದ ಒಳಗಾಗಿ ಆಧಾರ್ – ಪ್ಯಾನ್ ಲಿಂಕ್ ಮಾಡುವಂತೆ ಇಲಾಖೆ ಮತ್ತೊಮ್ಮೆ ಸೂಚಿಸಿದೆ, ಈ ಗಡುವು ಮೀರಿದಲ್ಲಿ ಅಂತಹ ವ್ಯಕ್ತಿಗಳಿಗೆ ಎರಡರಷ್ಟು’ಟಿಡಿಎಸ್’ ( ಮೂಲ ತೆರಿಗೆ ಕಡಿತ )ಮಾಡಲಾಗುವುದು ಎಂದು ತಿಳಿಸಿದೆ
ಇದೇ ವೇಳೆ ಹಣಕಾಸು ವರ್ಷದಲ್ಲಿ ಮ್ಯೂಚುವಲ್ ಫಂಡ್ ಮತ್ತು ಷೇರು ಖರೀದಿ, ಹತ್ತು ಲಕ್ಷ ರೂ. ಗಿಂತಲೂ ಅಧಿಕ ನಗದು ಜಮೆ ಸೇರಿದಂತೆ ವಿವಿಧ ವ್ಯವಹಾರಗಳ ವಿವರವನ್ನು ಒಳಗೊಂಡ ‘ಹಣಕಾಸು ವಹಿವಾಟು ಪಟ್ಟಿ’ ( ಎಸ್.ಎಫ್.ಟಿ) ಮೇ 31ರ ಒಳಗಾಗಿ ಸಲ್ಲಿಸುವಂತೆ ಬ್ಯಾಂಕ್ ಗಳು ಹಾಗೂ ವಿವಿಧ ಹಣಕಾಸು ಸಂಸ್ಥೆಗಳಿಗೆ ಇಲಾಖೆ ಸೂಚಿಸಿದೆ.

Leave a Reply

Your email address will not be published. Required fields are marked *

WhatsApp Group Join Now
Telegram Group Join Now