ಜನನ ಮರಣ ಪ್ರಮಾಣ ಪತ್ರ ಉಚಿತ! ನೋಂದಣಿ

0
WhatsApp Group Join Now
Telegram Group Join Now

ಕರ್ನಾಟಕದಲ್ಲಿ ಜನನ ಮತ್ತು ಮರಣ ಪ್ರಮಾಣಪತ್ರಗಳ ನೋಂದಣಿ ಪ್ರಕ್ರಿಯೆ ಜುಲೈ 01 ರಿಂದ ಆರಂಭಾಗಲಿದೆ ನಿರ್ವಹಣೆಯನ್ನು ಸ್ಥಳೀಯ ಸಂಸ್ಥೆಗಳು, ಪೌರಾಯುಕ್ತ ಕಚೇರಿಗಳು, ಮತ್ತು ಗ್ರಾಮ ಪಂಚಾಯತಿಗಳು ಮಾಡುತ್ತವೆ. ಇಲ್ಲಿದೆ ಜುಲೈ ತಿಂಗಳ ಪ್ರಕ್ರಿಯೆಗೆ ಸಂಬಂಧಿಸಿದ ಪೂರ್ಣ ಮಾಹಿತಿಯನ್ನು ನಾವು ನೀಡಲಿದ್ದೇವೆ.

ಜನನ ಪ್ರಮಾಣ ಪತ್ರ ನೋಂದಣಿ ಪ್ರಕ್ರಿಯೆ ಹೇಗೆ ಎಂದು ನೋಡೋಣ

1. ಮೊದಲಿಗೆ ಅರ್ಜಿಯ ಸಲ್ಲಿಕೆ :

ನೀವು ಆನ್ಲೈನ್ ಮೂಲಕ ಅರ್ಜಿ ನೋಂದಣಿ ಮಾಡಿಕೊಳ್ಳಲು ಇಚ್ಛಿಸಿದರೆ- ನೀವು ಕರ್ನಾಟಕ ಸರ್ಕಾರದ [ಜನನ ಮತ್ತು ಮರಣ ನೋಂದಣಿ](https://ejanma.karnataka.gov.in/) ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಆಫ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಿವುದಾದರೆ ಗ್ರಾಮ ಪಂಚಾಯತ್ ಕಚೇರಿ ಅಥವಾ ಸಂಬಂಧಿಸಿದ ಸ್ಥಳೀಯ ಸಂಸ್ಥೆಗೆ ನೇರವಾಗಿ ಹೋಗಿ ಅರ್ಜಿ ಸಲ್ಲಿಸಬೇಕು.

2. ಅಗತ್ಯ ದಾಖಲೆಗಳು :

ಆಸ್ಪತ್ರೆಯಿಂದ ನೀಡಲಾದ ಜನನ ಪ್ರಮಾಣ ಪತ್ರ (Hospital Birth Certificate). ಪೋಷಕರ ಗುರುತಿನ ಚೀಟಿ (Aadhaar Card, Voter ID). ಜನನ ಸ್ಥಳದ ಪತೆಯ ಪುರಾವೆ (Address Proof).

3. ಅರ್ಜಿ ಶುಲ್ಕ :

ನೋಂದಣಿ ಪ್ರಕ್ರಿಯೆ ಆರಂಭವಾಗಿ 21 ದಿನಗಳ ಒಳಗೆ ಮಾಡಿದರೆ ಉಚಿತ. 21 ದಿನಗಳ ನಂತರದ ಅರ್ಜಿಗಳಿಗೆ ದಂಡವನ್ನು ವಿಧಿಸಲಾಗುವುದು.

4. ಪ್ರಮಾಣಪತ್ರ ವಿತರಣೆ :

ನೋಂದಣಿ ಮತ್ತು ಪರಿಶೀಲನೆಯ ನಂತರ ಜನನ ಪ್ರಮಾಣಪತ್ರವನ್ನು ನಿಮಗೆ 7 ದಿನಗಳ ಒಳಗೆ ನೀಡಲಾಗುವುದು.

ಮರಣ ಪ್ರಮಾಣ ಪತ್ರ ನೋಂದಣಿ ಪ್ರಕ್ರಿಯೆ :

1. ಅರ್ಜಿಯ ಸಲ್ಲಿಕೆ :

ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಬಯಸಿದರೆ ಕರ್ನಾಟಕ ಸರ್ಕಾರದ [ಜನನ ಮತ್ತು ಮರಣ ನೋಂದಣಿ](https://ejanma.karnataka.gov.in/) ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಆಫ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಬಯಸಿದರೆ:ಗ್ರಾಮ ಪಂಚಾಯತ್ ಕಚೇರಿ ಅಥವಾ ಸಂಬಂಧಿಸಿದ ಸ್ಥಳೀಯ ಸಂಸ್ಥೆಗೆ ನೇರವಾಗಿ ಹೋಗಿ ಅರ್ಜಿ ಸಲ್ಲಿಸಬಹುದು.

2. ಮರಣ ಪ್ರಮಾಣ ಪತ್ರಗಾಗಿ ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲೆಗಳು ಹೀಗಿವೆ :

ಪ್ರಮುಖವಾಗಿ ಆಸ್ಪತ್ರೆಯಿಂದ ನೀಡಲಾದ ಮರಣ ಪ್ರಮಾಣ ಪತ್ರ (Hospital Death Certificate). ಮೃತರ ಗುರುತಿನ ಚೀಟಿ (Aadhaar Card, Voter ID). ಮರಣ ಸ್ಥಳದ ಪತೆಯ ಪುರಾವೆ (Address Proof).

3. ಅರ್ಜಿ ಶುಲ್ಕ :

ಅರ್ಜಿ ಆಹ್ವಾನ ಆರಂಭದ 21 ದಿನಗಳ ಒಳಗೆ ನೊಂದಣಿ ಮಾಡಿದರೆ ಉಚಿತವಾಗಿ ಅರ್ಜಿ ಸಲ್ಲಿಸಬಹುದು. 21 ದಿನಗಳ ನಂತರದ ಅರ್ಜಿಗಳಿಗೆ ದಂಡವನ್ನು ವಿಧಿಸಲಾಗುವುದು.

4. ಮರಣ ಪ್ರಮಾಣಪತ್ರ ವಿತರಣೆ :

ನೋಂದಣಿ ಮತ್ತು ಪರಿಶೀಲನೆಯ ನಂತರ ಮರಣ ಪ್ರಮಾಣಪತ್ರವನ್ನು ನಿಮಗೆ 7 ದಿನಗಳ ಒಳಗೆ ನೀಡಲಾಗುವುದು.

ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಸಲ್ಲಿಕೆಗಾಗಿ, ಕರ್ನಾಟಕ ಸರ್ಕಾರದ ಅಧಿಕೃತ [eJanMa](https://ejanma.karnataka.gov.in/) ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಅಧಿಕೃತ ವೆಬ್ಸೈಟ್

Leave a Reply

Your email address will not be published. Required fields are marked *

WhatsApp Group Join Now
Telegram Group Join Now