ಅರಿವು ವಿದ್ಯಾಭ್ಯಾಸ ಸಾಲ ಯೋಜನೆ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ

0
WhatsApp Group Join Now
Telegram Group Join Now

ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಡಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (CET/NEET) ಮುಖಾಂತರ ಎಂ.ಬಿ.ಬಿ.ಎಸ್/ ಬಿ.ಡಿ.ಎಸ್/ಬಿ ಆಯುಷ್/ ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್/ಬ್ಯಾಚುಲರ್ ಆಫ್ ಇಂಜಿನಿಯರಿಂಗ್/ಬ್ಯಾಚುಲರ್ ಆಫ್ ಟೆಕ್ನಾಲಜಿ ಕೋರ್ಸ್ ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಾಲವನ್ನು ನೀಡಲಾಗುತ್ತದೆ.

ಅರಿವು ಶಿಕ್ಷಣ ಸಾಲ ಯೋಜನೆ (ಫ್ರೆಶ್)”ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07-Jul-2024

ಅರ್ಹತೆಗಳು :

  • ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (CET/NEET) ಮುಖಾಂತರ ಎಂ.ಬಿ.ಬಿ.ಎಸ್, ಎಂ.ಡಿ, ಎಂ.ಎಸ್ ಕೋರ್ಸ್ ಗಳಿಗೆ, ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜು ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗರಿಷ್ಠ ರೂ. 5,00,000/- ವನ್ನು ನೀಡಲಾಗುತ್ತದೆ.
  • ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಸಿ.ಇ.ಟಿ./ನೀಟ್) ಮುಖಾಂತರ ಆಯ್ಕೆಯಾದ ಬಿ. ಡಿ. ಎಸ್, ಎಂ.ಡಿ.ಎಸ್ ಕೋರ್ಸುಗಳಿಗೆ ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜು ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗರಿಷ್ಠ ರೂ 1,00,000 ವರೆಗೆ ಮತ್ತು ಬಿ.ಆಯುಷ್ ಮತ್ತು ಎಂ.ಆಯುಷ್ ಕೋರ್ಸ್ ಗಳಿಗೆ, ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜು ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗರಿಷ್ಠ ರೂ. 50,000 ಗಳನ್ನು ಬಿಡುಗಡೆ ಮಾಡುವುದು.
  • ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಸಿ.ಇ.ಟಿ./ನೀಟ್) ಮುಖಾಂತರ ಆಯ್ಕೆಯಾದ ಬ್ಯಾಚುಲಾರ್ ಆಫ್ ಆರ್ಕಿಟೆಕ್ಟ/ಇಂಜಿನಿಯರಿಂಗ್/ಟೆಕ್ನಾಲಜಿ (ಬಿ.ಇ./ಬಿ.ಟೆಕ್), ಎಂ.ಟೆಕ್, ಎಂ.ಇ. ಬಿ.ಆರ್ಕ್. ಎಂ.ಆರ್ಕ್ ವ್ಯಾಸಾಂಗ ಮಾಡುತ್ತಿರುವ, ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜು ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗರಿಷ್ಠ ರೂ 50,000 ಗಳನ್ನು ಬಿಡುಗಡೆ ಮಾಡುವುದು.
  • ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (CET/NEET) ಮುಖಾಂತರ ಎಂ ಬಿ ಎ, ಎಂ ಸಿ ಎ, ಎಲ್ ಎಲ್ ಬಿ ಕೋರ್ಸಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಮಾತ್ರ ಗರಿಷ್ಠ ರೂ.50,000/-ಗಳನ್ನು ಸಾಲವಾಗಿ ನೀಡಲಾಗುವುದು.
  • ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಸಿ.ಇ.ಟಿ/ನೀಟ್) ಮುಖಾಂತರ ಆಯ್ಕೆಯಾದ B.Sc. in Horticulture, Agriculture, Dairy Technology, Forestry, Veterinary, Animal science, Food Technology, Bio Technology, Fisheries, Sericulture, Home/community Sciences, Food Nutrition and Dietetics, ಕೋರ್ಸ್‍ಗಳಿಗೆ ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜುಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಮಾತ್ರ ಗರಿಷ್ಟ ರೂ.50,000/-ಗಳು ಸಾಲವಾಗಿ ನೀಡಲಾಗುವುದು.
  • ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಸಿ.ಇ.ಟಿ/ನೀಟ್) ಮುಖಾಂತರ ಆಯ್ಕೆಯಾದ B.Pharma, M.Pharma, Pharma.D,and D.Pharma, ಕೋರ್ಸ್‍ಗಳಿಗೆ ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜುಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಮಾತ್ರ ಗರಿಷ್ಟ ರೂ.50,000/-ಗಳು ಸಾಲವಾಗಿ ನೀಡಲಾಗುವುದು.
  • ಎಲ್ಲಾ ಮೂಲಗಳಿಂದ ಕುಟುಂಬದ ವಾರ್ಷಿಕ ಆದಾಯ ರೂ. 8,00,000/- ಗಿಂತ ಕಡಿಮೆ ಇರಬೇಕು.. ವಿದ್ಯಾರ್ಥಿಯು ಪಡೆದ ಸಾಲವನ್ನು ಕೋರ್ಸ್ ಮುಗಿದ 1 ವರ್ಷದ ನಂತರ 48 ತಿಂಗಳ ಅವಧಿಯಲ್ಲಿ 2% ಬಡ್ಡಿದರದೊಂದಿಗೆ ಮರುಪಾವತಿ ಮಾಡಬೇಕು.

ಅಧಿಕೃತ ವೆಬ್ಸೈಟ್

Leave a Reply

Your email address will not be published. Required fields are marked *

WhatsApp Group Join Now
Telegram Group Join Now

You may have missed