ಕರ್ನಾಟಕ ರಾಜ್ಯದಲ್ಲಿ ಮರುವಿನ್ಯಾಸಗೊಳಿಸಿದ ಹವಮಾನ ಆಧಾರಿತ ಬೆಳೆ ವಿಮೆ ಯೋಜನೆ ಅನುಷ್ಠಾನ
ಕರ್ನಾಟಕ ರಾಜ್ಯದಲ್ಕಿ ಮರುವಿನ್ಯಾಸಗೊಳಿಸಿದ ಹವಮಾನ ಆಧಾರಿತ ಬೆಳೆ ವಿಮೆ ಯೋಜನೆ ಅಡಿ ತೋಟಗಾರಿಕ ಬೆಳೆಗಳನ್ನು 2024 25 ನೇ ಸಾಲಿನ ಹಿಂಗಾರು ಮತ್ತು ಮುಂಗಾರು ಹಂಗಾಮಗಳಿಗೆ ಗ್ರಾಮ ಪಂಚಾಯತ್/ನಗರ ಸ್ಥಳೀಯ ಸಂಸ್ಥೆಗಳ ಮಟ್ಟಕ್ಕೆ ಅಳವಡಿಸಿ ಅನುಷ್ಠಾನಗೊಳಿಸಲು ಅಧಿಸೂಚನೆ ಹೊರಡಿಸಿದೆ.
2024-25ನೇ ಸಾಲಿನಲ್ಲಿ ಹಿಂಗಾರು ಮತ್ತು ಮುಂಗಾರು ಹಂಗಾಮುಗಳ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಅನುಷ್ಠಾನಕ್ಕೆ ಯೋಜನೆವಾರು, ಬೆಳೆವಾರು ರೈತರ ವಿವರಗಳನ್ನು ಆನ್ಲೈನ್ ಪೋರ್ಟಲ್ ಮೂಲಕ ಮಾತ್ರ ನೋಂದಾಯಿಸಲು ಆದೇಶಿಸಿದೆ.
ಸಂರಕ್ಷಣೆಯ ತಂತ್ರಾಂಶವು Fruits ತಂತ್ರಾಶದೊಂದಿಗೆ ಸಂಯೋಜಿಸಲಾಗಿದ್ದು, ಬೆಳೆ ವಿಮೆ ಯೋಜನೆಗೆ Fruits ತಂತ್ರಾಂಶದಲ್ಲಿ ನೋಂದಣಿ ಕಡ್ಡಾಯವಾಗಿದೆ. ಮಾವು, ದ್ರಾಕ್ಷಿ, ದಾಳಿಂಬೆ ,ಪರಂಗಿ/ಪಪ್ಪಾಯ,ನಿಂಬೆ, ಅಡಿಕೆ,ಕರಿಮೆಣಸು, ವೀಳ್ಯದೆಲೆ, ಹಸಿ ಮೆಣಸಿನಕಾಯಿ, ಹೂಕೋಸು, ಶುಂಠಿ ಸ್ಥಳೀಯ ಅಪಾಯದ ಅವಧಿ, ಮೇಘಸ್ಪೋಟ ಜುಲೈ1 ರಿಂದ 31 ಅಕ್ಟೋಬರ್ 2024, ಆಲಿಕಲ್ಲು ಮಳೆ 1 ಜನವರಿ ಯಿಂದ 30 ಜೂನ್ 2025 ರವರೆಗೆ ಟರ್ಮ್ ಶೀಟ್, ರಿಸ್ಕ್ ಅವಧಿ, ವಿಮಾ ಮೊತ್ತ ಹಾಗೂ ಪ್ರೀಮಿಯಂ ಮೊತ್ತಕ್ಕೆ ಸೀಮಿತವಾಗಿದೆ. ಇಂತಹ ಸ್ಥಳೀಯ ಗಂಡಾಂತರಗಳ ಕಾರಣದಿಂದ ಬೆಳೆ ಹಾನಿ ಉಂಟಾದರೆ ರೈತರು 72 ಗಂಟೆಗಳೊಳಗೆ ವಿಮಾ ಕಚೇರಿಗೆ ತಿಳಿಸುವುದು. ವಿಮಾ ಕಛೇರಿಗಳು ನಷ್ಟವನ್ನು ನಿರ್ಧರಿಸಲು ನಷ್ಟ ನಿರ್ಧಾರಕರನ್ನು ಸಂಬಂಧಿಸಿದ ಸ್ಥಳಕ್ಕೆ ನಿಯೋಜಿಸಬೇಕು. ತೋಟಗಾರಿಕೆ ಇಲಾಖೆ ಹಾಗೂ ಕಂದಾಯ ಇಲಾಖೆಯವರು ಬೆಳೆಯ ನಷ್ಟ ನಿರ್ಧರಿಸುವಲ್ಲಿ ವಿಮಾ ಕಚೇರಿಗಳಿಗೆ ಸಂಪೂರ್ಣ ಸಹಕಾರ ನೀಡಬೇಕು. ಬ್ಯಾಂಕ್ ಗಳಲ್ಲಿ ಸಾಲ ಪಡೆದ ರೈತರನ್ನು ಈ ಯೋಜನೆಗೆ ಒಳಪಡಿಸಿಕೊಳ್ಳುವಂತೆ ಸೂಚಿಸಿದೆ.
ಬ್ಯಾಂಕುಗಳು ಮತ್ತು ಸಿ.ಎಸ್.ಸಿ. ಕೇಂದ್ರಗಳು ರೈತರ ದಾಖಲಾತಿಗಾಗಿ ಸಂರಕ್ಷಣೆ ಪೋರ್ಟಲ್ ನ್ನು ಬಳಸುತ್ತವೆ. ನಂತರ ಹಣವನ್ನು ವಿಮಾ ಕಚೇರಿಗಳಿಗೆ ವರ್ಗಾಯಿಸುತ್ತವೆ. ರೈತರ ವಿಮಾ ಕಂತಿನ ಮೊತ್ತದಲ್ಲಿ ಶೇಕಡ 4ರಷ್ಟು ಸೇವಾ ಶುಲ್ಕವನ್ನು ವಿಮಾ ಕಚೇರಿಗಳು ಬ್ಯಾಂಕುಗಳಿಗೆ ನೀಡತಕ್ಕದ್ದು. ವಿಮಾ ಸಂಸ್ಥೆಗಳು ಬೆಳೆ ವಿಮಾ ನಷ್ಟ ಪರಿಹಾರವನ್ನು ನೇರವಾಗಿ ರೈತರ ಖಾತೆಗಳಿಗೆ ವರ್ಗಾಯಿಸುವುದು.