ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಆನ್ಲೈನ್ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಖಾಲಿ ಇರುವ 90 ವಿವಿಧ ವೃಂದದ ಹುದ್ದೆಗಳಿಗೆ ಪ್ರಾಧಿಕಾರದ ಅಧಿಸೂಚನೆ ದಿನಾಂಕ 09.06.2024 ರಲ್ಲಿ ಸೂಚಿಸಿದಂತೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 16.05.2024 ರಿಂದ 15.06.2024 ರ ವರೆಗೆ ಅವಕಾಶ ನೀಡಲಾಗಿತ್ತು. ಆದರೆ ಕೆಲವು ಅಭ್ಯರ್ಥಿಗಳು ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರಗಳಿಗೆ ಮನವಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸಲು ಕೋರಿದ್ದರಿಂದ ಸದರಿ ಸಂಸ್ಥೆಯು ಪತ್ರ ಬರೆದು ಅರ್ಜಿ ಸಲ್ಲಿಕೆಯನ್ನು ವಿಸ್ತರಿಸುವಂತೆ ಪ್ರಾಧಿಕಾರಕ್ಕೆ ಕೋರಿರುತ್ತಾರೆ. ಆದ್ದರಿಂದ ಆನ್ಲೈನ್ ಅರ್ಜಿ ಸಲ್ಲಿಸಲು 16.06.2024 ರಿಂದ 29.06.2024ರ ವರೆಗೆ ಅವಕಾಶ ನೀಡಲಾಗಿದೆ. ಶುಲ್ಕವನ್ನು ಪಾವತಿಸಲು 01.07.2024 ಕೊನೆಯ ದಿನಾಂಕವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.