ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳಲ್ಲಿ 9000 ವಿವಿಧ ಹುದ್ದೆಗಳ ನೇಮಕಾತಿ.
ಕರ್ನಾಟಕ ರಾಜ್ಯದ ಯುವಜನತೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಆರಿಸಿಕೊಳ್ಳುವುದು. ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅದರ ಪರಿಣಾಮವಾಗಿ ಬೇರೆ ರಾಜ್ಯದ ಯುವಜನತೆ ನಮ್ಮ ರಾಜ್ಯದಲ್ಲಿ ಬ್ಯಾಂಕ್ ಉದ್ಯೋಗವನ್ನು ಗಳಿಸುತ್ತಿದ್ದಾರೆ. ದಕ್ಷಿ ಕನ್ನಡ ಜಿಲ್ಲೆ ದೇಶದಲ್ಲಿ ಬ್ಯಾಂಕಿಂಗ್ ಉದ್ಯಮವನ್ನು ಆರಂಭಿಸಿದ ಮೊದಲ ಜಿಲ್ಲೆ. ಇಂತಹ ಜಿಲ್ಲೆಯ ಜನತೆಗೆ ಈಗ ಪುನಃ ಒಂದು ಸುವರ್ಣಾವಕಾಶ. ಏನೆಂದರೆ ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ 9000 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27.06.2024.
ಹುದ್ದೆಗಳ ವಿವರ:
- ಕಚೇರಿ ಸಹಾಯಕ ವಿವಿಧೋದ್ದೇಶ: 5538
- ಆಫೀಸರ್ ಸ್ಕೇಲ್ 1 (AM): 2485
- ಆಫೀಸರ್ ಸ್ಕೇಲ್ II( ಸಾಮಾನ್ಯ) : 315
- ಆಫಿಸರ್ ಸ್ಕೇಲ್ II(ಐಟಿ): 68
- ಆಫೀಸರ್ ಸ್ಕೇಲ್ II(ಸಿಎ): 21
- ಆಫೀಸರ್ ಸ್ಕೇಲ್ II(ಕಾನೂನು) : 24
- ಆಫೀಸರ್ II(ಖಜಾನೆ ವ್ಯವಸ್ಥಾಪಕ) : 08
- ಆಫೀಸರ್ ಸ್ಕೇಲ್ II( ಮಾರ್ಕೆಟಿಂಗ್) :03
- ಆಫೀಸರ್ ಸ್ಕೇಲ್ II(ಕೃಷಿ): 59
- ಆಫೀಸರ್ ಸ್ಕೇಲ್ III (ಹಿರಿಯ ಮ್ಯಾನೇಜರ್): 73
ವೇತನ ಶ್ರೇಣಿ : ಕಛೇರಿ ಸಹಾಯಕ : ರೂ. 21,000-48,000
ಆಫೀಸರ್ ಸ್ಕೇಲ್ I: ರೂ. 51,000-58,000
ಆಫೀಸರ್ ಸ್ಕೇಲ್ II: ರೂ.48,170-69,800
ವೇತನದ ಜೊತೆ DA/HRA ಮುಂತಾದ ಸೌಲಭ್ಯಗಳು ಬ್ಯಾಂಕಿನ ನಿಯಮಗಳನ್ವಯ ದೊರೆಯಲಿವೆ.
ಶೈಕ್ಷಣಿಕ ಅರ್ಹತೆ:ಅಭ್ಯರ್ಥಿಗಳು 01.06.2024ರಂದು ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು.
ವಯೋಮಿತಿ ಆಫೀಸರ್ ಸ್ಕೇಲ್ I – 21 ರಿಂದ 40 ವರ್ಷ.
ಆಫೀಸರ್ ಸ್ಕೇಲ್ II- 21ರಿಂದ 32 ವರ್ಷ.
ಆಫೀಸರ್ ಸ್ಕೇಲ್ III- 18 ರಿಂದ 28 ವರ್ಷ.
ಕಛೇರಿ ಸಹಾಯಕ : 18-28 ವರ್ಷ.
ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ : ಪರಿಶಿಷ್ಟ ಪಂಗಡ 5 ವರ್ಷ, ಹಿಂದುಳಿದ ವರ್ಗ 3 ವರ್ಷ, ಅಂಗವಿಕಲರಿಗೆ 10 ವರ್ಷ.
ಅರ್ಜಿ ಶುಲ್ಕ : ಸಾಮಾನ್ಯ/ಹಿಂದುಳಿದ ವರ್ಗದವರಿಗೆ, ರೂ.850. ಪರಿಶಿಷ್ಟ ಜಾತಿ/ ಪಂಗಡ/ಅಂಗವಿಕಲರಿಗೆ ರೂ.175. ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸುವುದು.
ಆಯ್ಕೆ ವಿಧಾನ : ಪೂರ್ವಭಾವಿ ಲಿಖಿತ ಪರೀಕ್ಷೆ, ಮುಖ್ಯ ಪರೀಕ್ಷೆ, ಸಂದರ್ಶನ
ಪರೀಕ್ಷಾ ದಿನಾಂಕ : ಆಫೀಸರ್ ಗಳಿಗೆ , 3 ಮತ್ತು 4 ನೇ ಆಗಸ್ಟ್ 2024.
ಕಛೇರಿ ಸಹಾಯಕರಿಗೆ 10, 17 ಮತ್ತು 18ನೇ ಆಗಸ್ಟ್ 2024.