ಪೋಸ್ಟ್ ಆಫೀಸ್ ನ ಈ ಆಕ್ಸಿಡೆಂಟ್ ಇನ್ಸೂರೆನ್ಸ್ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ : ಕೇವಲ 749 ಕಟ್ಟಿ 15 ಲಕ್ಷ ಸಿಗುತ್ತದೆ.
ಭಾರತೀಯ ಅಂಚೆ ಇಲಾಖೆ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸಹಯೋಗದೊಂದಿಗೆ ಆದಿತ್ಯ ಬಿರ್ಲಾ ಸಮಗ್ರ ರಕ್ಷಣಾ ಯೋಜನೆಯಡಿ ಅಪಘಾತ ವಿಮೆ ಸೌಲಭ್ಯ ಲಭ್ಯ ವಿದೆ. ವಿಮೆ ಯೋಜನೆ 18 ರಿಂದ 65 ವರ್ಷದೊಳಗಿನ ವ್ಯಕ್ತಿಗಳಿಗೆ ಅನ್ವಯಿಸುತ್ತದೆ.
ಈ ವಿಮೆ ಯೋಜನೆಯಡಿ ರಸ್ತೆ ಅಪಘಾತ, ಜಾರಿ ಬೀಳುವುದು, ಹಾವು ಕಡಿತ, ಅಗ್ನಿ ಅವಘಡ, ವಿದ್ಯುತ್ ಆಘಾತ ಮುಂತಾದ ಅಪಘಾತಗಳಿಗೆ ಆರ್ಥಿಕ ಪರಿಹಾರ ನೀಡಲಾಗುತ್ತದೆ. ವಾರ್ಷಿಕ ಪ್ರೀಮಿಯಂ ರೂ.749/- ಪಾವತಿಸಿದರೆ ವಿಮೆ ಮೊತ್ತ 15 ಲಕ್ಷ ಲಭಿಸುವುದು. ವಾರ್ಷಿಕ ಪ್ರೀಮಿಯಂ ರೂ.549/- ಪಾವತಿಸಿದರೆ 10 ಲಕ್ಷ ವಿಮೆ ಮೊತ್ತ ಲಭಿಸುವುದು. ವಿಮೆ ಮಾಡಲು ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್ ನಾಮಿನಿಯ ಹೆಸರು ಹಾಗೂ ಜನ್ಮ ದಿನಾಂಕ ಅವಶ್ಯಕವಾಗಿದೆ.
ವಿಮೆಯ ವೈಶಿಷ್ಟ್ಯಗಳು ಈ ರೀತಿ ಇವೆ.
*ಅಪಘಾತದಲ್ಲಿ ನಿಧನ ಹೊಂದಿದರೆ ಸಂಪೂರ್ಣ ವಿಮಾ ಮೊತ್ತ.
*ಶಾಶ್ವತ ಸಂಪೂರ್ಣ ವೈಫಲ್ಯ ಸಂಪೂರ್ಣ ವಿಮಾ ಮೊತ್ತ.
*ಶಾಶ್ವತ ಭಾಗಶಃ ವೈಫಲ್ಯ ಸಂಪೂರ್ಣ ವಿಮಾ ಮೊತ್ತ.
*ಒಳರೋಗಿ ವೆಚ್ಚ ರೂ.60,000/-ದ ವರೆಗೆ ಕವರೇಜ್.
*ಆಕಸ್ಮಿಕ ಆಸ್ಪತ್ರೆಯ ನಗದು ರೂ. 1,000/- ದಿನಕ್ಕೆ ಹತ್ತು ದಿನಗಳ ವರೆಗೆ.
*ಹೊರರೋಗಿ ವೆಚ್ಚ ರೂ. 30,000 ದ ವರೆಗೆ ಕವರೇಜ್ ವೆಚ್ಚ.