ಯು ಜಿ ಸಿ ಇ ಟಿ ದಾಖಲೆಗಳನ್ನು ಆನ್ಲೈನ್ ಮೂಲಕ ಪರಿಶೀಲಿಸಿರುವ ಕುರಿತು ಮಾಹಿತಿ ಇಲ್ಲಿದೆ
- ಆನ್ಲೈನ್ ಅರ್ಜಿಗಳಲ್ಲಿ ವಿವಿಧ ಮೀಸಲಾತಿಗಳನ್ನು ಕ್ಲೇಮ್ ಮಾಡಿದಲ್ಲಿ ಮಾತ್ರ ಪರಿಗಣಿಸಲಾಗಿರುತ್ತದೆ.
- ಯುಜಿಸಿಇಟಿ 2024ಕ್ಕೆ ಅಭ್ಯರ್ಥಿಗಳು ಆನ್ಲೈನ್ ಅರ್ಜಿಯಲ್ಲಿ ನಮೂದಿಸಿದ SATS ಸಂಖ್ಯೆಯನ್ನು ಆಧರಿಸಿ ವಿದ್ಯಾರ್ಥಿಗಳ ವ್ಯಾಸಂಗ , ಕನ್ನಡ ಮಾಧ್ಯಮ, ಗ್ರಾಮಿಣ ವ್ಯಾಸಂಗದ ವಿವರಗಳನ್ನು ಮತ್ತು ಆರ್ ಡಿ ಸಂಖ್ಯೆಯನ್ನು ಆಧರಿಸಿ ಮೀಸಲಾತಿ [ SC, ST, ಪ್ರವರ್ಗ (1) , 2ಎ, 2ಬಿ, 3ಎ, 3ಬಿ] 371(ಜೆ) ಧಾರ್ಮಿಕ ಅಲ್ಪಸಂಖ್ಯಾತ, ಎನ್ ಸಿ ಎಲ್ ಸಿ ಮತ್ತು ಇತರೆ ಮಾಹಿತಿಗಳನ್ನು ಆಯಾ ಇಲಾಖೆಯ ವೆಬ್ ಸರ್ವಿಸ್ ಮೂಲಕ ಪರಿಶೀಲಿಸಲಾಗಿರುತ್ತದೆ.
- ಅರ್ಹತಾ ಖಂಡಿಕೆ ಇ, ಎಫ್, ಜಿ, ಎಚ್, ಒ ಕ್ಲಾಸ್ಗಳಿಗೆ ಅನ್ವಯಿಸುವಂತೆ ಆಯಾ ಇಲಾಖೆಯವರು ಪರಿಶೀಲಿಸಿ ನೀಡಿದಂತೆ ಅರ್ಹತೆಯನ್ನು ಪರಿಗಣಿಸಲಾಗಿದೆ.
- ಈ ಮೇಲಿನ ಕ್ರಮ ಸಂಖ್ಯೆ 2 ಮತ್ತು 3 ರಂತೆ ಪರಿಶೀಲಿಸಿದ ವಿವರಗಳನ್ನು ಪ್ರಾಧಿಕಾರದ ವೆಬ್ಸೈಟ್ನಲ್ಲಿ ನೀಡಲಾಗಿದೆ.
- ಅಭ್ಯರ್ಥಿಗಳು ನಿಗದಿತ ಲಿಂಕ್ ನಲ್ಲಿ ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ ಪರಿಶೀಲಿಸಿದ ವಿವರಗಳನ್ನು ನೋಡಬಹುದಾಗಿದೆ. ವೆರಿಫಿಕೇಶನ್ ಕ್ಲಿಪ್ ಡೌನ್ಲೋಡ್ ಮಾಡಿಕೊಳ್ಳಲು ಲಿಂಕನ್ನು ಪ್ರಾಧಿಕಾರದ ವೆಬ್ಸೈಟ್ನಲ್ಲಿ ಸದ್ಯದಲ್ಲಿಯೇ ನೀಡಲಾಗುವುದು.
ಮುಂದಿನ ಹಂತಗಳು
ಪ್ರಕಟಿಸಲಾಗುವ ವೇಳಾಪಟ್ಟಿ ಅನುಸಾರ ವೆರಿಫಿಕೇಶನ್ ಕ್ಲಿಪ್ ಡೌನ್ಲೋಡ್ ಮಾಡಿಕೊಳ್ಳುವುದು.
ಆದ್ಯತಾ ಕ್ರಮದಲ್ಲಿ ಆಸಕ್ತಿ ಇರುವ ಕಾಲೇಜುಗಳ ಮತ್ತು ಕೋರ್ಸುಗಳ ಪಟ್ಟಿಯನ್ನು ತಯಾರಿಸಿಕೊಳ್ಳುವುದು.
ಮೊದಲನೇ ಸುತ್ತಿನ ವೇಳಾಪಟ್ಟಿ ಪ್ರಕಟಿಸಿದ ನಂತರ ಪ್ರಾಧಿಕಾರದ ವೆಬ್ಸೈಟ್ನಲ್ಲಿ optionಗಳನ್ನು ಆದ್ಯತಾ ಕ್ರಮದಲ್ಲಿ ದಾಖಲಿಸುವುದು.
ಸೂಚನೆ: ಅರ್ಹತೆ ಕಂಡಿಕೆಗಳಾದ ಬಿ, ಸಿ, ಡಿ, ಐ, ಜೆ, ಕೆ, ಎಲ್, ಎಂ, ಎನ್, ಝೆಡ್ ಗಳನ್ನು ನಮೂದಿಸಿರುವ ಅಭ್ಯರ್ಥಿಗಳಿಗೆ ಆಫ್ ಲೈನ್ ಪರಿಶೀಲನೆಗೆ ಹಾಜರಾಗಲು ಪ್ರತ್ಯೇಕ ವೇಳಾಪಟ್ಟಿಯನ್ನು ನೀಡಿ ಪರಿಶೀಲನೆ ಮಾಡಲಾಗಿರುತ್ತದೆ ಮತ್ತು ಆಫ್ ಲೈನ್ ಪರಿಶೀಲನೆಗೆ ಗೈರುಹಾಜರಾಗಿರುವ ಅಭ್ಯರ್ಥಿಗಳು ಸೀಟು ಹಂಚಿಕೆ ಅರ್ಹತೆ ಪಡೆದಿರುವುದಿಲ್ಲ.