ಯುಎಇ ಪ್ರವಾಸ ಹೋಗುವ ಪ್ರವಾಸಿಗರ ಗಮನಕ್ಕೆಅತ್ಯಂತ ಪ್ರಮುಖ ಮಾಹಿತಿ
UAE ಗೆ ಪ್ರವಾಸ ಹೋಗುವ ಪ್ರವಾಸಿಗರು ತಿಳಿದಿರಬೇಕಾದ ಅಗತ್ಯ ವಿವರಗಳು
ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ತೆರಳುವ ಪ್ರವಾಸಿಗರು ಈ ಕೆಳಗೆ ಕಾಣಸಿದ ದಾಖಲೆಗಳನ್ನು ಅಗತ್ಯವಾಗಿ ಹೊಂದಿರಬೇಕಾಗುತ್ತದೆ.
- ಪಾಸ್‌ಪೋರ್ಟ್ : ನಿಮ್ಮ ಪಾಸ್‌ಪೋರ್ಟ್ ಅವಧಿ ನಿಮ್ಮ ಪ್ರವಾಸ ದಿನದಿಂದ ಕನಿಷ್ಠ ಆರು ತಿಂಗಳು ಇರುವುದನ್ನು
ಖಾತ್ರಿಪಡಿಸಿಕೊಳ್ಳಿ. - ಮರುಪ್ರಯಾಣದ ಟಿಕೆಟ್ : ಪ್ರವಾಸಿಗರು ತಮ್ಮ ಮರುಪ್ರಯಾಣದ ಟಿಕೆಟ್ ಬುಕ್ ಮಾಡಿ ಇಟ್ಟುಕೊಳ್ಳುವುದು
ಅಗತ್ಯವಾಗಿದೆ. - ತಂಗುವಿಕೆಯ ವಿವರಗಳು: ಪ್ರವಾಸಿಗರು ತಾವು ಉಳಿದುಕೊಳ್ಳುವ ಹೋಟೆಲ್‌ನ ರಿಸರ್ವೇಶನ್ ದಾಖಲೆಗಳನ್ನು
ಹೊಂದಿರುವುದು ಅತ್ಯಗತ್ಯ. - ಆರ್ಥಿಕ ದಾಖಲೆಗಳು: ಪ್ರವಾಸಿಗರು ಒಂದು ತಿಂಗಳ ವಿಸಾ ಅವಧಿಯ ಭೇಟಿಗೆ ತಮ್ಮ ಖಾತೆ ಅಥವಾ ತಮ್ಮ ಬಳಿಯಲ್ಲಿ ಕನಿಷ್ಠ 3000 ದಿರ್ಹಾನ್ ಗಳನ್ನು (ರೂ.68000) ಹೊಂದಿರಬೇಕು. ಒಂದು ತಿಂಗಳಿಗಿಂತ ಹೆಚ್ಚಿನ ಅವಧಿಯ ಭೇಟಿಗೆ ಹೆಚ್ಚುವರಿ 5000 ದಿರ್ಹಾನ್‌ಗಳನ್ನು ಹೊಂದಿರಬೇಕು.
ಸಂಬಂಧಿಕರು / ಗೆಳೆಯರನ್ನು ಸಂದರ್ಶಿಸಲು ಹೋಗುವ ಪ್ರವಾಸಿಗರು ಹೊಂದಿರಬೇಕಾದ ಹೆಚ್ಚುವರಿ
ದಾಖಲೆಗಳು
- ಸಂಬಂಧಿಕರ ವಿಸಾ ಮತ್ತು ಪಾಸ್‌ಪೋರ್ಟ್ ನಕಲು ಪ್ರತಿಗಳು
- ಸಂಬಂಧಿಕರ/ಗೆಳೆಯರ ವಿಳಾಸ, ದೂರವಾಣಿ ಮತ್ತು ವಾಸಸ್ಥಳದ ವಿವರಗಳು.