SSLC ಪರೀಕ್ಷೆ-2 ರ ವೇಳಾಪಟ್ಟಿ 2024

WhatsApp Group Join Now
Telegram Group Join Now

2024 sslc ಪರೀಕ್ಷೆ 2 ಪ್ರಾರಂಭ

ಪ್ರಾರಂಭ ದಿನಾಂಕ – 07.06.2024 ಮುಕ್ತಾಯ ದಿನಾಂಕ 14.06.2024 ಹೆಚ್ಚಿನ ಮಾಹಿತಿ ಕೆಳಗೆ ನೀಡಲಾಗಿದೆ .

ಸೂಚನೆಗಳು:
1.15.06.2024 (ಶನಿವಾರ) ರಂದು ಜೆ.ಟಿ.ಎಸ್. (56, 57, 58, 59 & 75, 76, 77 ವಿಷಯಗಳು) ವಿದ್ಯಾರ್ಥಿಗಳಿಗೆ ಪ್ರಾಯೋಗಿಕ
ಹಾಗೂ ಮೌಖಿಕ ಪರೀಕ್ಷೆಗಳನ್ನು ಆಯಾ ಶಾಲೆಗಳಲ್ಲಿ ನಡೆಸಲಾಗುವುದು.

  1. ವಿಷಯ ಸಂಕೇತ 15 ಮತ್ತು 60ರ ವಿಷಯಗಳು ಆದರ್ಶವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ
    ಆನ್ವಯವಾಗುತ್ತವೆ.
  2. ಹಿಂದೂಸ್ತಾನಿ ಸಂಗೀತ ಮತ್ತು ಕರ್ನಾಟಕ ಸಂಗೀತ ವಿಷಯದ ಪರೀಕ್ಷೆಯನ್ನು ಮಧ್ಯಾಹ್ನ 2.00 ಗಂಟೆಯಿಂದ ಸಾಯಂಕಾಲ 5.15
    ರವರೆಗೆ ನಿಗದಿಪಡಿಸಿದೆ. ಸದರಿ ವಿಷಯಗಳ ತಾತ್ವಿಕ ಪರೀಕ್ಷೆಯನ್ನು ಮಧ್ಯಾಹ್ನ 2.00 ಗಂಟೆಯಿಂದ ಮಧ್ಯಾಹ್ನ 3.45 ಗಂಟೆಯವರೆಗೆ
    ಮತ್ತು ಪ್ರಾಯೋಗಿಕ ಪರೀಕ್ಷೆಯನ್ನು ಮಧ್ಯಾಹ್ನ 3.45 ರಿಂದ ಸಾಯಂಕಾಲ 5.15 ಗಂಟೆಯವರೆಗೆ ನಡೆಸಲಾಗುವುದು.
  3. ವಿಶೇಷ ಚೇತನರ ಹಕ್ಕುಗಳ ಅಧಿನಿಯಮ 2016ರನ್ವಯ ವಿವಿಧ ಪ್ರಕಾರದ ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ ಬರಹಗಾರರ
    ಸೌಲಭ್ಯ ಅಥವಾ ಹೆಚ್ಚುವರಿ ಸಮಯದ ಅಥವಾ ಎರಡನ್ನೂ ಪಡೆಯುವ ಅವಕಾಶವಿದೆ. ಸದರಿ ವಿದ್ಯಾರ್ಥಿಗಳು ಮೂರು ಗಂಟೆಯ
    ಪ್ರಶ್ನೆಪತ್ರಿಕೆಗೆ ಉತ್ತರಿಸಲು ಹೆಚ್ಚುವರಿಯಾಗಿ 60 ನಿಮಿಷಗಳು, ಎರಡೂವರೆ ಗಂಟೆಯ ಪ್ರಶ್ನೆಪತ್ರಿಕೆಗೆ 50 ನಿಮಿಷಗಳು, ಎರಡು
    ಗಂಟೆಯ ಪ್ರಶ್ನೆಪತ್ರಿಕೆಗೆ 40 ನಿಮಿಷಗಳು, ಒಂದೂವರೆ ಗಂಟೆಯ ಪ್ರಶ್ನೆಪತ್ರಿಕೆಗೆ ಹೆಚ್ಚುವರಿಯಾಗಿ 30 ನಿಮಿಷಗಳನ್ನು
    ನೀಡಲಾಗುವುದು.
  4. ಪ್ರಥಮ ಭಾಷಾ ವಿಷಯಗಳು ಮತ್ತು ಐಚ್ಛಿಕ ವಿಷಯಗಳಿಗೆ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೆ ಮತ್ತು ದ್ವಿತೀಯ ಭಾಷಾ
    ವಿಷಯಗಳು ಹಾಗೂ ತೃತೀಯ ಭಾಷಾ ವಿಷಯಗಳಿಗೆ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.15ರವರೆಗೆ ಅವಧಿ ನಿಗದಿಪಡಿಸಿದೆ.
  5. ಪ್ರಥಮ ಭಾಷಾ ವಿಷಯಗಳು ಮತ್ತು ಐಚ್ಛಿಕ ವಿಷಯಗಳ ಪರೀಕ್ಷೆ ಬರೆಯಲು 3.00 ಗಂಟೆ ಮತ್ತು ಪ್ರಶ್ನೆಪತ್ರಿಕೆ ಓದಲು 15 ನಿಮಿಷ
    ಹಾಗೂ ದ್ವಿತೀಯ ಮತ್ತು ತೃತೀಯ ಭಾಷಾ ವಿಷಯಗಳಿಗೆ ಪರೀಕ್ಷೆ ಬರೆಯಲು 2 ಗಂಟೆ 45 ನಿಮಿಷ ಹಾಗೂ ಪ್ರಶ್ನೆಪತ್ರಿಕೆ ಓದಲು 15 ನಿಮಿಷ ನಿಗದಿಪಡಿಸಲಾಗಿದೆ.
  6. ಎನ್.ಎಸ್.ಕ್ಯೂ.ಎಫ್, ವಿಷಯಗಳ ಪರೀಕ್ಷೆ ಬೆಳಗ್ಗೆ 10.15 ರಿಂದ 12.30ರವರೆಗೆ ನಡೆಯಲಿದೆ.
  7. ಎನ್.ಎಸ್.ಕ್ಯೂ.ಎಫ್, ಪರೀಕ್ಷಾ ವಿಷಯಗಳ ಪರೀಕ್ಷೆ ಬರೆಯಲು 2.00 ಗಂಟೆ ಹಾಗೂ ಪ್ರಶ್ನೆಪತ್ರಿಕೆ ಓದಲು 15 ನಿಮಿಷ
    ನಿಗದಿಪಡಿಸಲಾಗಿದೆ.
  8. ವಿಭಿನ್ನ ಸಾಮರ್ಥ್ಯವುಳ್ಳ ಅಭ್ಯರ್ಥಿಗಳು ಉತ್ತರಿಸುವ ಪರ್ಯಾಯ ವಿಷಯಗಳು ಮತ್ತು ವಿಷಯ ಸಂಕೇತಗಳ ವಿವರ ಕೆಳಕಂಡಂತಿದೆ.
ಸಮಾಜಶಾಸ್ತ್ರ. ಅರ್ಥಶಾಸ್ತ್ರರಾಜ್ಯಶಾಸ್ತ್ರಹಿಂದೂಸ್ತಾನಿ ಸಂಗೀತಕರ್ನಾಟಕ ಸಂಗೀತಹಿಂದೂಸ್ತಾನಿ/ ಕರ್ನಾಟಕ ಸಂಗೀತ
959697282998

Leave a Comment

WhatsApp Group Join Now
Telegram Group Join Now