ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ನಲ್ಲಿ 247 ವಿವಿಧ ಹುದ್ದೆಗಳಿಗೆ ನೇಮಕಾತಿ

WhatsApp Group Join Now
Telegram Group Join Now

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ನಲ್ಲಿ 247 ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮೆಕ್ಯಾನಿಕಲ್ ಇಂಜಿನಿಯರ್, ಸಿವಿಲ್ ಇಂಜಿನಿಯರ್, ಎಲೆಕ್ಟ್ರಾನಿಕ್ ಇಂಜಿನಿಯರ್, ಸೀನಿಯರ್ ಆಫೀಸರ್ ಸೇರಿದಂತೆ ವಿವಿಧ ಹುದ್ದೆಗಳಿಗೆ 05.06.2024 ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ‌. 30.06.2024 ಅರ್ಜಿ ಸಲ್ಲಿಸಲು ಕೊನೆಯ ದಿ‌ನಾಂಕವಾಗಿದೆ. .
ಅರ್ಜಿ ಸಲ್ಲಿಸುವವರು ಹೆಚ್.ಪಿ.ಸಿ.ಎಲ್. ನೇಮಕಾತಿ ಪೋರ್ಟಲ್ ಗೆ ಭೇಟಿ ನೀಡಿ ಅಗತ್ಯ ಮಾಹಿತಿಗಳನ್ನು ತುಂಬಿ ರಿಜಿಸ್ಟರ್ ಆಗಿ ನಂತರ ಸವಿವರವಾದ ಮಾಹಿತಿ ತುಂಬಿ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ಸಂದರ್ಶನ, ಮೂಲ ದಾಖಲೆಗಳ ಪರಿಶೀಲನೆ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅಭ್ಯರ್ಥಿಗಳು ಬಿಇ / ಬಿ.ಟೆಕ್ / ಸಿಎ / ಐಸಿಎಐ / ಎಂಬಿಎ / ಎಂಸಿಎ / ಎಂಎಸ್ಸಿ / ಪಿಜಿ ಡಿಗ್ರಿಗಳನ್ನು ಹುದ್ದೆವಾರು ಪಾಸ್‌ ಮಾಡಿರಬೇಕು. ಜತೆಗೆ ನಿಗದಿತ ಕಾರ್ಯಾನುಭವವನ್ನು ಹುದ್ದೆವಾರು ಹೆಚ್‌ಪಿಸಿಎಲ್‌ ತಿಳಿಸಿದಂತೆ ಹೊಂದಿರಬೇಕು. ಕನಿಷ್ಠ 18 ವರ್ಷ ಗರಿಷ್ಠ 45 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
50,000-2,80,000 ವೇತನ ಶ್ರೇಣಿಯ ಉದ್ಯೋಗಗಳೂ ಇವೆ. ಐಎಎಸ್ ಆಫೀಸರ್ ಹುದ್ದೆಗಳಿಗೆ ಗಳಿಗೆ ಮಾತ್ರ ಸಂಚಿತ ವೇತನ 15,00,000 ವಾರ್ಷಿಕ ವೇತನ ನಿಗದಿಪಡಿಸಲಾಗಿದೆ.

Leave a Comment

WhatsApp Group Join Now
Telegram Group Join Now