ಬೆಂಗಳೂರು:ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ನಿರೀಕ್ಷಿಸುತ್ತಿರುವ 2025ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆ-1 ಫಲಿತಾಂಶವನ್ನು ಇಂದು, ಮೇ 2 ರಂದು ಪ್ರಕಟಿಸಲಾಗುತ್ತಿದೆ. ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದು, ಫಲಿತಾಂಶವನ್ನು ಮಧ್ಯಾಹ್ನ 12:30 ಗಂಟೆಯ ನಂತರ ಸರ್ಕಾರದ ಅಧಿಕೃತ ಜಾಲತಾಣ [https://karresults.nic.in/](https://karresults.nic.in/) ನಲ್ಲಿ ಪರಿಶೀಲಿಸಬಹುದಾಗಿದೆ.
ಫಲಿತಾಂಶ ಪ್ರಕಟಣೆಗೆ ಮುನ್ನ ಬೆಳಿಗ್ಗೆ 11:30ಕ್ಕೆ ಪತ್ರಿಕಾಗೋಷ್ಠಿ ನಡೆಯಲಿದ್ದು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಶ್ರೀ ಮಧು ಬಂಗಾರಪ್ಪ ಅವರು ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ.
ಈ ಬಾರಿ ಎಸ್ಸೆಸೆಲ್ಸಿ ಪರೀಕ್ಷೆಗಳನ್ನು ಮಾರ್ಚ್ 21ರಿಂದ ಏಪ್ರಿಲ್ 4ರ ವರೆಗೆ ನಡೆಸಲಾಗಿತ್ತು. ಎಲ್ಲಾ ವಿಷಯಗಳ ಉತ್ತರಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಮಂಡಳಿ ತಿಳಿಸಿದೆ.
ಫಲಿತಾಂಶವನ್ನು ಈ ರೀತಿ ವೀಕ್ಷಿಸಬಹುದು:
1. ಮೊದಲು [https://karresults.nic.in/](https://karresults.nic.in/) ವೆಬ್‌ಸೈಟ್‌ಗೆ ತೆರಳಿ.
2. ಮುಖ್ಯ ಪುಟದಲ್ಲಿ ‘SSLC Result 2025’ ಎಂಬ ಲಿಂಕ್‌ನ್ನು ಆಯ್ಕೆಮಾಡಿ.
3. ನಿಮ್ಮ ರಿಜಿಸ್ಟ್ರೇಶನ್ ಸಂಖ್ಯೆ ಹಾಗೂ ಜನ್ಮ ದಿನಾಂಕ ಸೇರಿ ಅಗತ್ಯ ಮಾಹಿತಿಯನ್ನು ನಮೂದಿಸಿ.
4. ನಂತರ ಫಲಿತಾಂಶದ ಅಂಕಪಟ್ಟಿ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಸ್ಕ್ರೀನ್‌ನಲ್ಲಿ ತೋರಿಸಲಾಗುತ್ತದೆ.
5. ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದ್ದು, ಪ್ರಿಂಟ್‌ಔಟ್ ಕೂಡ ತೆಗೆದುಕೊಳ್ಳಬಹುದು.
ವಿದ್ಯಾರ್ಥಿಗಳಿಗೆ ಶುಭಾಶಯಗಳು – ನಿಮ್ಮ ಪರಿಶ್ರಮ ಫಲಕೊಡಲಿ!
ಮತ್ತೊಂದು ಸುಲಭ ವಿಧಾನ ತಿಳಿಯಿರಿ :
KAR 10 ಎಂದು ಬರೆದು ಸ್ಪೇಸ್ ಕೊಡಿ ನಂತರ ನೋಂದಣಿ ಸಂಖ್ಯೆ ಟೈಪ್ ಮಾಡಿ 56263 ಗೆ ಸಂದೇಶ ಕಳುಹಿಸಿ.
ಮತ್ತೆ ಅದೇ ನಿಮ್ಮ ಫೋನ್ ನಂಬರ್ ಗೆ ಫಲಿತಾಂಶ ಕಳುಹಿಸುತ್ತದೆ.