ಪಿ.ಎಂ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 17ನೇ ಕಂತಿನ ಹಣ ಬಿಡುಗಡೆಯಾಗಿದ್ದು, ಫಲಾನುಭವಿಗಳ ಪಟ್ಟಿಯನ್ನು ಈಗಾಗಲೇ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಸಿದ ರೈತರು ಪಿಎಂ ಕಿಸಾನ್ ಸಮ್ಮಾನ್ ನಿಧಿ ವೆಬ್ಸೈಟ್ ಗೆ ಭೇಟಿ ನೀಡಿ ರಾಜ್ಯ, ಜಿಲ್ಲೆ, ತಾಲೂಕು, ಬ್ಲಾಕ್ ಹಾಗೂ ಗ್ರಾಮದ ಹೆಸರನ್ನು ನಮೂದಿಸಿದರೆ ಆ ಗ್ರಾಮದ ಎಲ್ಲಾ ಫಲಾನುಭವಿಗಳ ಪಟ್ಟಿ ಕಾಣಿಸುತ್ತದೆ. ಈ ಪಟ್ಟಿಯಲ್ಲಿ ಹೆಸರು ಇರುವ ರೈತರ ಖಾತೆಗೆ 17ನೇ ಕಂತಿನ ಹಣವು ಜಮೆಯಾಗುವುದು.
ಪಿ.ಎಂ. ಕಿಸಾನ್ ಸಮ್ಮಾನ್ ನಿಧಿ 17 ಕಂತಿನ ಹಣ ಬಿಡುಗಡೆಯಾಗಿದ್ದು ಫಲಾನುಭವಿಗಳ ಪಟ್ಟಿಯನ್ನು ಪರೀಕ್ಷಿಸುವ ಹಂತಗಳು
Step 1
PM KISAN SAMMAN NIDHI ಎಂಬ ವೆಬ್ಸೈಟ್ ಗೆ ಭೇಟಿ ನೀಡಬೇಕು.
Step 2
‘Farmers Corner’ ವಿಭಾಗಕ್ಕೆ ನ್ಯಾವಿಗೇಟ್ ಮಾಡಿ’Beneficiary Status’ ಮೇಲೆ ಕ್ಲಿಕ್ ಮಾಡಿ.
Step 3
ಮೊದಲಿಗೆ state ಎಂಬಲ್ಲಿ click ಮಾಡಿದಾಗ ರಾಜ್ಯಗಳ ಪಟ್ಟಿ ಕಾಣಿಸುತ್ತದೆ. Karnataka ಎಂದು select ಮಾಡಬೇಕು.
ಎರಡನೇ ಹಂತದಲ್ಲಿ district ಎಂಬಲ್ಲಿ click ಮಾಡಬೇಕು. ಜಿಲ್ಲೆಗಳ ಪಟ್ಟಿ ಕಾಣಿಸುತ್ತದೆ. ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಬೇಕು.
sub district ಎಂಬ option ಮೇಲೆ ಕ್ಲಿಕ್ ಮಾಡಿದಾಗ ತಾಲೂಕುಗಳ ಪಟ್ಟಿ ಕಾಣಿಸುತ್ತದೆ. ನಿಮ್ಮ ತಾಲೂಕು ಆಯ್ಕೆ ಮಾಡಬೇಕು.
Block ಎಂಬಲ್ಲಿclick ಮಾಡಿದಾಗ ಅಲ್ಲಿ ಕೂಡ ತಾಲೂಕುಗಳ ಪಟ್ಟಿ ಕಾಣಿಸುತ್ತದೆ. ನಿಮ್ಮ block ಆಯ್ಕೆ ಮಾಡಿ.
ಕೊನೆಯಲ್ಲಿ village ಎಂಬಲ್ಲಿ click ಮಾಡಿ ನಿಮ್ಮ ಗ್ರಾಮವನ್ನು ಆಯ್ಕೆ ಮಾಡಿ get list ಎಂಬಲ್ಲಿ click ಮಾಡಿದಾಗ ಫಲಾನುಭವಿಗಳ ಪಟ್ಟಿ ಕಾಣಿಸುತ್ತದೆ.ಇಂಗ್ಲೀಷ್ ವರ್ಣಮಾಲೆಯ ಪ್ರಕಾರ ಹೆಸರುಗಳ ಪಟ್ಟಿ ಇರುವುದು. ಕೆಳಗೆ ಪುಟಗಳ ಸಂಖ್ಯೆ ಇರುತ್ತದೆ. ಆ ಸಂಖ್ಯೆಯ ಮೇಲೆ click ಮಾಡಿದಾಗ ಮುಂದಿನ ಪುಟದಲ್ಲಿರುವ ಹೆಸರುಗಳ ಪಟ್ಟಿ ಕಾಣಿಸುತ್ತದೆ.