ಕೃಷಿಯನ್ನು ಮೀರಿ, ಆಹಾರ ಸಂಸ್ಕರಣೆಯಲ್ಲಿ ನಿಮ್ಮ ಉದ್ಯಮದ ಕನಸನ್ನು ಸಾಕಾರಗೊಳಿಸಲು ಭಾರತ ಸರ್ಕಾರದ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಯೋಜನೆ (PMFME) ಒಡ್ಡುತ್ತಿದೆ ಚಿನ್ನದ ಅವಕಾಶ! ಕರ್ನಾಟಕದ ರೈತರು, ಯುವ ಉದ್ಯಮಿಗಳು, ಮತ್ತು ಸ್ವಸಹಾಯ ಸಂಘಗಳಿಗೆ ಈ ಯೋಜನೆಯಡಿ 15 ಲಕ್ಷ ರೂ. ಸಬ್ಸಿಡಿ ಲಭ್ಯವಿದೆ. ಇದರಲ್ಲಿ ಕೇಂದ್ರ ಸರ್ಕಾರ 6 ಲಕ್ಷ ರೂ. ಮತ್ತು ರಾಜ್ಯ ಸರ್ಕಾರ 9 ಲಕ್ಷ ರೂ. ಒದಗಿಸುತ್ತಿದೆ.
PMFME ಯೋಜನೆ ಎಂದರೇನು?
ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಪ್ರೋತ್ಸಾಹಿಸಲು ಭಾರತ ಸರ್ಕಾರದ ಆಹಾರ ಸಂಸ್ಕರಣಾ ಉದ್ಯಮ ಮಂತ್ರಾಲಯದಿಂದ ಜಾರಿಗೆ ತರಲಾದ PMFME ಯೋಜನೆ, ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆಯನ್ನು ಒದಗಿಸಿ, ರೈತರ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಕರ್ನಾಟಕದಲ್ಲಿ ಈ ಯೋಜನೆಯು ದೇಶದಲ್ಲೇ ಅತ್ಯಂತ ಯಶಸ್ವಿಯಾಗಿ ಜಾರಿಯಾಗುತ್ತಿದ್ದು, 14 ಇನ್ಕ್ಯುಬೇಶನ್ ಕೇಂದ್ರಗಳು ರಾಜ್ಯಕ್ಕೆ ಮಂಜೂರಾಗಿವೆ—ಇದು ದೇಶದಲ್ಲೇ ಅತಿ ಹೆಚ್ಚು.
ಯಾರು ಅರ್ಜಿ ಸಲ್ಲಿಸಬಹುದು?
– ವೈಯಕ್ತಿಕ ಉದ್ಯಮಿಗಳು: ಆಹಾರ ಸಂಸ್ಕರಣೆಯಲ್ಲಿ ಆಸಕ್ತಿಯಿರುವ ಯುವಕರು, ರೈತರು.
– ಸ್ವಸಹಾಯ ಸಂಘಗಳು: ಕೃಷಿಯಲ್ಲಿ ತೊಡಗಿರುವ ಗುಂಪುಗಳು.
– ಕೃಷಿ ಉತ್ಪಾದಕ ಸಂಘಗಳು: FPOಗಳು.
– ಸಣ್ಣ ಮತ್ತು ಕಿರು ಉದ್ದಿಮೆಗಳು: ಆಹಾರ ಸಂಸ್ಕರಣೆಯಲ್ಲಿ ತೊಡಗಿರುವವರು.
ಯಾವ ಉದ್ದಿಮೆಗಳಿಗೆ ಸಬ್ಸಿಡಿ?
1. ಸಿರಿಧಾನ್ಯ ಮತ್ತು ಧಾನ್ಯ ಸಂಸ್ಕರಣೆ
2. ಬೆಲ್ಲ, ನಿಂಬೆ ಉತ್ಪನ್ನಗಳ ಘಟಕ
3. ಬೇಕರಿ ಉತ್ಪನ್ನಗಳ ಘಟಕ
4. ಕೋಲ್ಡ್ ಪ್ರೆಸ್ಡ್ ಆಯಿಲ್ ಘಟಕ
5. ಮೆಣಸಿನಕಾಯಿ ಪುಡಿ ಘಟಕ
6. ಶುಂಠಿ ಸಂಸ್ಕರಣಾ ಘಟಕ
7. ಅನಾನಸ್ ಸಂಸ್ಕರಣಾ ಘಟಕ
8. ಮಸಾಲೆ ಉತ್ಪನ್ನಗಳ ಘಟಕ
9. ತೆಂಗಿನಕಾಯಿ ಉತ್ಪನ್ನಗಳ ಘಟಕ
10. ಕೋಳಿ ಮತ್ತು ಸಮುದ್ರ ಆಹಾರ ಸಂಸ್ಕರಣೆ.
ಅರ್ಜಿ ಸಲ್ಲಿಸುವುದು ಹೇಗೆ?
1. ನೇರ ಭೇಟಿ: ನಿಮ್ಮ ಜಿಲ್ಲೆಯ ಕೃಷಿ ಅಥವಾ ತೋಟಗಾರಿಕೆ ಇಲಾಖೆ ಕಚೇರಿಯನ್ನು ಸಂಪರ್ಕಿಸಿ.
2. DRP ಸಂಪರ್ಕ: ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ (District Resource Person) ಮೂಲಕ ಮಾಹಿತಿ ಪಡೆಯಿರಿ.
3. ಆನ್‌ಲೈನ್ ಅರ್ಜಿ: [PMFME ಅಧಿಕೃತ ವೆಬ್‌ಸೈಟ್](https://pmfme.mofpi.gov.in/)ಗೆ ಭೇಟಿ ನೀಡಿ.
ಅಗತ್ಯ ದಾಖಲೆಗಳು :
– ಆಧಾರ್ ಕಾರ್ಡ್
– ಪ್ಯಾನ್ ಕಾರ್ಡ್
– ರೇಷನ್ ಕಾರ್ಡ್
– ಬ್ಯಾಂಕ್ ಪಾಸ್‌ಬುಕ್
– 6 ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್
– ಫೋಟೋ ಕಾಪಿ
– ಮೊಬೈಲ್ ಸಂಖ್ಯೆ.
ಹೆಚ್ಚಿನ ಮಾಹಿತಿಗಾಗಿ :
– ಕೇಂದ್ರ ಸರ್ಕಾರದ PMFME ವೆಬ್‌ಸೈಟ್: [Click Here](https://pmfme.mofpi.gov.in/)
– ಕರ್ನಾಟಕ ಕೆಪೆಕ್ ಸಂಸ್ಥೆ(https://www.keapc.karnataka.gov.in/).