ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಒಂದು ವರ್ಷದ ಅವಧಿಗೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು, ಮಕ್ಕಳ ತಜ್ಞರು ಅರವಳಿಕೆ ತಜ್ಞರು ಮತ್ತು ಫಿಶಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಡಿ.ಇ.ಐ.ಸಿ. ಘಟಕದ ಮಕ್ಕಳ ತಜ್ಞರ ಹುದ್ದೆಗೆ , ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ಐಸಿಯು ಘಟಕದ ಎಂ.ಬಿ.ಬಿ.ಎಸ್. ಹುದ್ದೆಗೆ, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಎನ್.ಐ.ಸಿ.ಯು. ಘಟಕದ ಎಂ.ಬಿ.ಬಿ.ಎಸ್. ಹುದ್ದೆಗೆ, ನಗರ ಸಮುದಾಯ ಆರೋಗ್ಯ ಕೇಂದ್ರ ಉಳ್ಳಾಲ ಇಲ್ಲಿಗೆ ಎಂ.ಬಿ.ಬಿ.ಎಸ್. ಹುದ್ದೆಗೆ, ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಎನ್.ಓ.ಹೆಚ್.ಪಿ. ಕಾರ್ಯಕ್ರಮದಡಿಯಲ್ಲಿ ದಂತ ಸಹಾಯಕ ಹುದ್ದೆಗೆ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಸರಕಾರಿ ಲೇಡಿಗೋಷನ್ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮುಲ್ಕಿ ಹಾಗೂ ನಗರ ಸಮುದಾಯ ಆರೋಗ್ಯ ಕೇಂದ್ರ ಉಳ್ಳಾಲ ಇಲ್ಲಿಗೆ ಶುಶ್ರೂಷಕಿ ಹುದ್ದೆಗೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಲಿಂಗಪ್ಪಯ್ಯಕಾಡು(ಮುಲ್ಕಿ), ಗುತ್ತಕಾಡು( ಕಿನ್ನಿಗೋಳಿ),ಮಳವೂರು(ಬಜಪೆ), ಉಕ್ಕುಡ(ವಿಟ್ಲ), ಪಚ್ಚನಾಡಿ(ಮಂಗಳೂರು) ಕ್ಲಿನಿಕ್ ಗಳಲ್ಲಿ ಖಾಲಿ ಇರುವ ವೈದ್ಯಾಧಿಕಾರಿ ಹುದ್ದೆಗಳಿಗೆ, ಹೊಯ್ಗೆ ಬಜಾರ್(ಪೋರ್ಟ್ ) ಮಂಗಳೂರು ಇಲ್ಲಿ ಖಾಲಿ ಇರುವ ಶುಶ್ರೂಷಕಿ ಹುದ್ದೆಗೆ, ಲಿಂಗಪ್ಪಯ್ಯಕಾಡು(ಮುಲ್ಕಿ)ಯಲ್ಲಿ ಖಾಲಿ ಇರುವ ಪ್ರಯೋಗಶಾಲಾ ತಂತ್ರಜ್ಞರ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೆಮಕಾತಿ ಮಾಡಲು ಅರ್ಜಿ ಆಹ್ವಾನಿಸಿದೆ.
ಸದರಿ ಹುದ್ದೆಗಳ ಅರ್ಜಿ ನಮೂನೆ ಮತ್ತು ಹುದ್ದೆಯ ವಿವರ, ವಿದ್ಯಾರ್ಹತೆ, ವೇತನ ಕುರಿತಾದ ಸಂಪೂರ್ಣ ಮಾಹಿತಿಯನ್ನು ಇಲಾಖಾ ವೆಬ್ಸೈಟ್ www.dkhfw.in ನಲ್ಲಿ ಮತ್ತು ಜಿಲ್ಲಾ ಯೋಜನಾ ಘಟಕ ದ.ಕ. ಮಂಗಳೂರು ಈ ಕಚೇರಿಯ ನೋಟೀಸ್ ಬೋರ್ಡ್ ನಲ್ಲಿ ಪ್ರಕಟಿಸಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಇಲಾಖಾ ವೆಬ್ಸೈಟ್ ನಲ್ಲಿಯೇ ಕಡ್ಡಾಯವಾಗಿ ಪಡೆದು ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿಯನ್ನು ಅಗತ್ಯ ದಾಖಲೆಗಳ ಜೊತೆ 24/06/2024 ರ ಸಂಜೆ 3:30ರ ಒಳಗಾಗಿ ಕಚೇರಿಗೆ ತಲುಪಿಸುವುದು. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ 0824-2424501ನ್ನು ಸಂಪರ್ಕಿಸುವಂತೆ ಕೋರಿದೆ.