ಧಾರ್ಮಿಕ ದತ್ತಿ ಇಲಾಖೆ ರಾಮೇಶ್ವರಂ- ಕನ್ಯಾಕುಮಾರಿ-ಮಧುರೈ-ತಿರುವನಂತಪುರಂ ಮೊದಲಾದ ಸ್ಥಳಗಳಿಗೆ ಕರ್ನಾಟಕ ಭಾರತ್ ಗೌರವ್ ದಕ್ಷಿಣ ಕ್ಷೇತ್ರಗಳ ಯಾತ್ರೆ ಹಮ್ಮಿಕೊಂಡಿರುತ್ತದೆ. ಪ್ರತಿ ಯಾತ್ರಾರ್ಥಿಗೆ ರೂ.5000/- ಸಹಾಯಧನ ನಿಗದಿಪಡಿಸಲಾಗಿದೆ. ಯಾತ್ರೆಯ ಒಟ್ಟು ಪ್ಯಾಕೇಜ್ ಮೊತ್ತ ರೂ.15000/- ಇರುತ್ತದೆ. ಸರಕಾರದಿಂದ ರೂ.5000/- ಸಹಾಯಧನ ಸಿಗುವ ಕಾರಣ ಯಾತ್ರಿಕರು ರೂ.10,000/- ಪಾವತಿಸಬೇಕಾಗುತ್ತದೆ.
ಬೆಳಗಾವಿ, ಹುಬ್ಬಳ್ಳಿ, ಬೀರೂರು, ತುಮಕೂರು, ಹಾವೇರಿ, ದಾವಣಗೆರೆ, ಯಶವಂತಪುರ ಈ ಸ್ಥಳಗಳಿಂದ ವಿಶೇಷ ರೈಲಿನ ವ್ಯವಸ್ಥೆ ಇರುತ್ತದೆ. ಮೊದಲ ಹಂತದಲ್ಲಿ ದಿನಾಂಕ 23.06.2024ರಂದು ರೈಲು ನಿರ್ಗಮಿಸಿ ದಿನಾಂಕ 28.06.2024 ಆಗಮಿಸುತ್ತದೆ. ಎರಡನೇ ಹಂತದಲ್ಲಿ ದಿನಾಂಕ 01.07.2024 ರಂದು ನಿರ್ಗಮಿಸಿ 06.07.2024ರಂದು ಆಗಮಿಸುತ್ತದೆ.
ಯಾತ್ರಾರ್ಥಿಗಳ ಆರೋಗ್ಯ ದೃಷ್ಟಿಯಿಂದ ವೈದ್ಯಕೀಯ ವ್ಯವಸ್ಥೆಯನ್ನು ಒದಗಿಸಲಾಗಿದೆ.
ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ಪ್ರವರ್ಗ ‘ಸಿ’ ಅಧಿಸೂಚಿತ ದೇವಾಲಯ/ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು/ನೌಕರರು ಮತ್ತು ಅವರ ಕುಟುಂಬದ ಒಬ್ಬ ಸದಸ್ಯರನ್ನು ಕರ್ನಾಟಕ ಭಾರತ್ ಗೌರವ್ ದಕ್ಷಿಣ ಕ್ಷೇತ್ರಗಳ ಯಾತ್ರೆ ಯೋಜನೆಯಡಿ ಉಚಿತವಾಗಿ ಯಾತ್ರೆಗೆ ಕಳುಹಿಸಲಾಗುತ್ತದೆ. ಟಿಕೆಟ್ ಬುಕ್ಕಿಂಗ್ ಗಾಗಿ 8895931291, 8595931292, 8895931294 ಈ ಸಂಖ್ಯೆಗಳಿಗೆ ಸಂಪರ್ಕಿಸುವಂತೆ ಕೋರಿದೆ.