ಮನೆ ಖರ್ಚು, EMI, ಮಕ್ಕಳ ವಿದ್ಯಾಭ್ಯಾಸ… ತಿಂಗಳಿಗೆ ನಿಶ್ಚಿತ ಆದಾಯ ಇದ್ದರೆ ಎಲ್ಲವೂ ಸುಲಭ. ಬ್ಯಾಂಕ್ FD ಗಿಂತ ಚೆನ್ನಾಗಿಯೂ, ಸ್ಟಾಕ್ ಮಾರುಕಟ್ಟೆಗಿಂತ ಭದ್ರವಾಗಿಯೂ ಇರುವ ಯೋಜನೆ ಬೇಕಾ? ಹಾಗಾದರೆ ಪೋಸ್ಟ್ ಆಫೀಸ್ ನ ಮಾಸಿಕ ಆದಾಯ ಯೋಜನೆ (MIS) ಒಮ್ಮೆ ನೋಡಿ!
ಈ ಯೋಜನೆಯ ಬಗ್ಗೆ ನಿಮಗೆ ತಿಳಿಯಲೇಬೇಕಾದ 5 ಟಿಪ್ಸ್ ಇವೆ:
1. ಒಂದೇ ಸಾರಿ ಹೂಡಿಕೆ ಮಾಡಿ, ತಿಂಗಳಿಗೆ ಹಣ ಪಡೆಯಿರಿ.
MIS ನಲ್ಲಿ ನೀವು ಒಂದು ಬಾರಿ ಹಣ ಹೂಡಿಸುತ್ತೀರಿ, ಆಮೇಲೆ 5 ವರ್ಷಗಳವರೆಗೆ ಪ್ರತಿ ತಿಂಗಳು ಬಡ್ಡಿ ನಿಮ್ಮ ಖಾತೆಗೆ ಬಂದು ಬೀಳುತ್ತದೆ.
2. ಬಡ್ಡಿದರ ಖಾತರಿ – 7.5%
ಇದೀಗ 2025ರ MIS ಯೋಜನೆಯ ಬಡ್ಡಿದರ 7.5%. ಮಾರ್ಕೆಟ್ ಏರಿದ್ರೂ ಇಳಿದ್ರೂ ಬದಲಾಗಲ್ಲ – ಹೀಗಾಗಿ ಇದು ಖಾತರಿಯ ಆದಾಯ.
3. ಎಷ್ಟು ಹೂಡಿಸಬಹುದು?
– ವೈಯಕ್ತಿಕ ಖಾತೆಗೆ ಗರಿಷ್ಠ ₹4.5 ಲಕ್ಷ
– ಜಂಟಿ ಖಾತೆಗೆ ₹15 ಲಕ್ಷವರೆಗೆ ಹೆಚ್ಚು ಹೂಡಿಕೆ, ಹೆಚ್ಚು ಬಡ್ಡಿ,ತಿಂಗಳಿಗೆ ಹೆಚ್ಚು ಹಣ!
ಉದಾಹರಣೆ: ₹15 ಲಕ್ಷ ಹೂಡಿಸಿದ್ರೆ?ನೀವು ₹15 ಲಕ್ಷ ಹೂಡಿಸಿದ್ರೆ, ತಿಂಗಳಿಗೆ ₹9,375 ರಷ್ಟು ಬಡ್ಡಿ ನಿಮಗೆ ಬರುತ್ತದೆ.
4. ಯಾರು ಈ ಯೋಜನೆಗೆ ಅರ್ಹರು?
– ನೀವು 18 ವರ್ಷ ಮೀರಿದ ಭಾರತೀಯ ನಾಗರಿಕರಾಗಿದ್ದರೆ ಸಾಕು
– ಮಕ್ಕಳ ಹೆಸರಿನಲ್ಲಿ ಹೂಡಿಸಲು ಪೋಷಕರು ಜಂಟಿ ಖಾತೆ ತೆಗೆದುಕೊಳ್ಳಬಹುದು.
5.ತುಂಬಾ ಸೆಫ್– ಯಾರೂ ಮೋಸ ಮಾಡುವುದಿಲ್ಲ.
ಇದು ಸರ್ಕಾರದ ಯೋಜನೆ, ಹೀಗಾಗಿ ಸಂಪೂರ್ಣ ಸುರಕ್ಷಿತ, ರಿಟರ್ನ್ ಗ್ಯಾರಂಟಿ. ಇಲ್ಲಿ ಯಾವುದೇ ರಿಸ್ಕ್ ಇಲ್ಲ.
ಖಾತರಿಯ ಆದಾಯ, tension-free!
ಪೆನ್ಷನ್ ಇಲ್ಲದವರು, ಹೌಸ್‌ವೈಫ್‌ಗಳು, ನಿವೃತ್ತರಾದವರು ಅಥವಾ ಸೆಫ್ ಹೂಡಿಕೆ ಹುಡುಕುವ ಎಲ್ಲರಿಗೂ ಇದು ಸೂಪರ್ ಪ್ಲಾನ್.
ನಿಮ್ಮ ಪೋಸ್ಟ್ ಆಫೀಸ್ ಗೆ ಹೋಗಿ MIS ಓಪನ್ ಮಾಡಿ, ಒಮ್ಮೆ ನೋಡಿ ಲಾಭವಿದೆ.