Online Portal link will be enabled from 14-05-2024 to 20-05-2024 for Students Passed 12 th Std in CBSC/CISCE/IGCSE /NATA etc for Enter 12 th standerd marks…
ಯುಜಿಸಿಟಿ-2024 – 12ನೇ ತರಗತಿಯನ್ನು ಸಿಬಿಎಸ್ಸಿ / ಸಿಐಎಸ್ಸಿ / ಐಜಿಸಿಎಸ್‌ಇ ಮುಂತಾದ ಸಂಸ್ಥೆಗಳಿಂದ
ತೇರ್ಗಡೆ ಹೊಂದಿದವರು ಅಂಕಗಳನ್ನು ದಾಖಲಿಸುವುದು ಹಾಗು ನಾಟಾ ಅಂಕಗಳನ್ನು ದಾಖಲಿಸುವುದು
12ನೇ ತರಗತಿಯನ್ನು ಸಿಬಿಎಸ್ ಇ, (ಜಮ್ಮು ಮತ್ತು ಕಾಶ್ಮೀರ ಸೇರಿ) ಸಿಐಎಸ್‌ಸಿ, 10+2, ಐಜಿಪಿಎಸ್
ಮತ್ತಿತರ ಬೋರ್ಡುಗಳಲ್ಲಿ 2024 ರಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಆನ್‌ಲೈನ್ ಪೋರ್ಟಲ್ ಲಿಂಕ್ ಅನ್ನು
14-05-2024 ರಿಂದ ಕರೆಯಲಾಗುವುದು. ಅಂತಹ ಎಲ್ಲ ಅಭ್ಯರ್ಥಿಗಳು 20-05-2024 ರೊಳಗಾಗಿ ಕಡ್ಡಾಯವಾಗಿ
ತಮ್ಮ 12ನೇ ತರಗತಿಯ ಅಂಶಗಳ ವಿವರಗಳನ್ನು ಕೆಇಎ ಪೋರ್ಟಲ್ ಮೂಲಕ ನಿಗದಿತ ಲಿಂಕ್‌ನಲ್ಲಿ ಅಂಕಗಳನ್ನು
ದಾಖಲಿಸಲು ಮತ್ತು ಮಾರ್ಕ್ಸ್ ಪ್ರತಿಯನ್ನು ಕಡ್ಡಾಯವಾಗಿ ಅಪ್‌ಲೋಡ್ ಮಾಡಲು ಸೂಚಿಸಿದೆ.
2024 ಕ್ಕಿಂತ ಮೊದಲೇ ಹಿಂದಿನ ವರ್ಷಗಳಲ್ಲಿ ಕರ್ನಾಟಕ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿದೆ.
ವಿದ್ಯಾರ್ಥಿಗಳು ಮತ್ತು 12ನೇ ತರಗತಿಯನ್ನು ಉತ್ತೀರ್ಣರಾಗಿರುವವರೂ ಸಹ ಅಂಕಗಳನ್ನು ದಾಖಲಿಸಲು ಸೂಚಿಸಿದೆ.
ಅರ್ಹತಾ ಕಂಡಿಕೆ’ Clause-Y” ಅನ್ನು ಆಯ್ಕೆ ಮಾಡಿರುವ ಅಭ್ಯರ್ಥಿಗಳೂ ಸಹ ಅಂಕಗಳನ್ನು ಪೋರ್ಟಲ್ ನಲ್ಲಿ
ದಾಖಲಿಸಬೇಕು, ಕರ್ನಾಟಕ ದ್ವಿತೀಯ ಪಿಯುಸಿ 2024ರ ಅಂಕಗಳನ್ನು ಪ್ರಾಧಿಕಾರವು ನೇರವಾಗಿ ಪದವಿ ಪೂರ್ವ
ಶಿಕ್ಷಣ ಇಲಾಖೆಯಿಂದ ನೇರವಾಗಿ ಪಡೆದುಕೊಳ್ಳುತ್ತದೆ.
ಆರ್ಕಿಟೆಕ್ಟರ್ ಕೋರ್ಸುಗಳ ಪ್ರವೇಶಕ್ಕಾಗಿ ಅಭ್ಯರ್ಥಿಗಳು 2024 ರ ನಾಟಾ ಪರೀಕ್ಷೆಯ ಅಂಕಗಳನ್ನು
ಅರ್ಹತೆಯ ಅನುಗುಣವಾಗಿ ದಾಖಲಿಸಬಹುದಾಗಿದೆ, ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ ಸೈಟ್
http://kea.kar.nic.in ಗೆ ಭೇಟಿ ನೀಡಲು ಕೋರಿದೆ